Shivamogga: 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟ

Shivamogga: ಎಂಟು ತಿಂಗಳ ಟಗರೊಂದು ದಾಖಲೆಯ ಮೊತ್ತಕ್ಕೆ ಹರಾಜು ಆಗಿದೆ. ಹೌದು,ಮಾಂಸದ ದೃಷ್ಟಿಯಿಂದ ಅಲ್ಲದೆ, ತಳಿ ಅಭಿವೃದ್ಧಿಗೆ ಬಂಡೂರು ತಳಿಯ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಎಂಬುವವರ ಮನೆಯಲ್ಲಿ ಟಗರು ಜನಸಿದ್ದು, ಕೆಲ ದಿನಗಳ ಬಳಿಕ ಟಿ.ನರಸೀಪುರದ ಮೂಲದವರಿಗೆ ಉಲ್ಲಾಸ್ 20 ಸಾವಿರಕ್ಕೆ ಟಗರು ಮಾರಾಟ ಮಾಡಿದ್ದರು.ಮತ್ತೆ ವಾಪಸ್ಸು 50 ಸಾವಿರಕ್ಕೆ ಅದೇ ಟಗರನ್ನು ಉಲ್ಲಾಸ್ ಖರೀದಿಸಿದ್ದರು. ಇದೀಗ ಶಿವಮೊಗ್ಗ (Shivamogga) ಮೂಲದ ಉದ್ಯಮಿ ಜವಾದ್ ಎಂಬುವರಿಗೆ ಉಲ್ಲಾಸ್ ಅದೇ ಟಗರನ್ನು 1.48 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಈ ಕಾರಣಕ್ಕಾಗಿ ಉಲ್ಲಾಸ್ ತಂದೆ ಮನೋಹರ್ ಅವರಿಗೆ ಜವಾದ್ ಸನ್ಮಾನಿಸಿ, 1.48 ಲಕ್ಷ ಹಣ ನೀಡಿ ಟಗರು ಕೊಂಡೊಯ್ದರು ಎನ್ನಲಾಗಿದೆ.

Comments are closed.