ಫೆ.14 ಕ್ಕೆ ಜಯಲಲಿತಾ ಆಸ್ತಿ ತಮಿಳುನಾಡಿಗೆ ಹಸ್ತಾಂತರ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ದಿ.ಜೆ.ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹಸ್ತಾಂತರಿಸುವ ದಿನ ಕೊನೆಗೂ ಬಂದಿದೆ. ಆಸ್ತಿ ಹಾಗೂ ವಸ್ತುಗಳನ್ನು ಫೆ.14 ಮತ್ತು 15 ರಂದು ತಮಿಳುನಾಡು ಸರಕಾರಕ್ಕೆ ಹಸ್ತಾಂತರಿಸಲು ಬೆಂಗಳೂರಿನ ವಿಶೇಷ ನ್ಯಾಯಾಲಯ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ಸಿಬಿಐ, ಇ.ಡಿ. ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಜಯಲಲಿತಾ ಅವರಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಭರಣ ಹಾಗೂ ಆಸ್ತಿಗಳನ್ನು ಹರಾಜು ಹಾಕುವ ಬದಲಿಗೆ ತಮಿಳುನಾಡು ಸರಕಾರದ ಸುರ್ಪಿಗೆ ನೀಡಲು ಆದೇಶಿಸಿದೆ.

Comments are closed.