Bangalore:ಹೆಚ್ಚುತ್ತಿರುವ ಹದಿಹರೆಯದ ಗರ್ಭಧಾರಣೆ; ಕರ್ನಾಟಕದ ಯಾವ ಜಿಲ್ಲೆಯಲ್ಲಿ ಹೆಚ್ಚು ಕೇಸು?

Bangalore: ಕರ್ನಾಟಕದಲ್ಲಿ ಮೂರು ವರ್ಷದಲ್ಲಿ 30 ಸಾವಿರಕ್ಕೂ ಹೆಚ್ಚು ಹದಿಹರೆಯದವರು ಗರ್ಭಿಣಿಯಾಗಿದ್ದಾರೆ ಎಂಬ ಆಘಾತಕಾರಿ ದತ್ತಾಂಶವೊಂದು ಬಹಿರಂಗವಾಗಿದೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ ಮಾತ್ರ 2021-22 ಮತ್ತು 2023-24 ರ ನಡುವೆ 33,621 ಹದಿಹರೆಯದವರು ಗರ್ಭಿಣಿಯರಾಗಿದ್ದು, ಇದರಲ್ಲಿ ಬೆಂಗಳೂರು ಟಾಪ್‌ ಲಿಸ್ಟ್‌ನಲ್ಲಿದೆ. ಬೆಂಗಳೂರು ನಗರ ಪ್ರದೇಶದಲ್ಲಿ 4,324 ಪ್ರಕರಣ, 2,468 ಪ್ರಕರಣಗಳನ್ನು ಪಡೆದು ವಿಜಯನಗರ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನ ಬಳ್ಳಾರಿ ಪಡೆದುಕೊಂಡಿದೆ. ಇಲ್ಲಿ 2,283 ಹದಿಹರೆಯದ ಹುಡುಗಿಯರು ಗರ್ಭ ಧರಿಸಿದ್ದಾರೆ. ಬೆಳಗಾವಿಯಲ್ಲಿ 2,224, ಮೈಸೂರಿನಲ್ಲಿ 1,930 ಪ್ರಕರಣಗಳು ವರದಿಯಾಗಿದೆ.

ಏನಿದು ಹದಿಹರೆಯದ ಗರ್ಭಧಾರಣೆ?
15-19 ವರ್ಷಗಳ ನಡುವೆ ಸಂಭವಿಸುವ ಗರ್ಭಧಾರಣೆಯನ್ನು ಹದಿಹರೆಯದ ಗರ್ಭಧಾರಣೆ ಎನ್ನುತ್ತಾರೆ. ಅತ್ಯಾಚಾರ, ಬಾಲ್ಯವಿವಾಹ, ಹರೆಯದ ಸಂಬಂಧಗಳು ಇದಕ್ಕೆ ಕಾರಣ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಕರಣ ಹೆಚ್ಚು ಕಂಡು ಬಂದಿದೆ.

ಹದಿಹರೆಯದವರಲ್ಲಿ ಈ ಪ್ರಕರಣ ಹೆಚ್ಚಲು ಕಾರಣವೇನು?
ಸಾಮಾಜಿಕ ಆರ್ಥಿಕ ಪರಿಸ್ಥಿತಿ, ಸುಲಭ ಅಂತರ್ಜಾಲ ಪ್ರವೇಶ, ಕೌಟುಂಬಿಕ ಅಸ್ಥಿರತೆ, ಲೈಂಗಿಕ ಶಿಕ್ಷಣದ ಕೊರತೆಯಿಂದಾಗಿ ಹುಡುಗ-ಹುಡುಗಿ ಸಂಬಂಧ ಹೊಂದುತ್ತಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅವರು ಹೇಳಿರುವ ಪ್ರಕಾರ, ಅನುಚಿತ ವಿಷಯಕ್ಕೆ ಒಡ್ಡಿಕೊಳ್ಳುವ ಸಾಮಾಜಿಕ ಮಾಧ್ಯಮವನ್ನು ದೂರಿದ್ದಾರೆ.

Comments are closed.