ಮೇ.10 ಕ್ಕೆ ಕಾಮೆಡ್‌-ಕೆ ಎಕ್ಸಾಂ

Bangalore: ರಾಜ್ಯದ 150ಕ್ಕೂ ಹೆಚ್ಚಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಎಂಜಿನಿಯರಿಂಗ್‌ ಪ್ರವೇಶಕ್ಕೆ ʼಯುನಿಗೇಜ್‌-2025′ ಪ್ರವೇಶ ಪರೀಕ್ಷೆಯು ಮೇ.10 ರಂದು ನಡೆಸಲು ಕಾಮೆಡ್‌-ಕೆ ನಿರ್ಧರಿಸಿದೆ.

ಫೆ.3-ಮಾ.15 ರವರೆಗೆ ಅರ್ಜಿ ಸಲ್ಲಸಬಹುದು. ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಯಲಿದೆ. 200 ಕ್ಕೂ ಹೆಚ್ಚಿನ ನಗರಗಳ 400 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 20000 ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದೆ ಎಂದು ಕಾಮೆಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್‌ ಹೇಳಿದ್ದಾರೆ.

Comments are closed.