ಬೆಳ್ತಂಗಡಿ: ಸರಕಾರಿ ಬಸ್ ಅವ್ಯವಸ್ಥೆ ವಿರುದ್ಧ ಎಬಿವಿಪಿ ಉಗ್ರ ಹೋರಾಟ

Belthangady: ಜ.28 ರಂದು (ಮಂಗಳವಾರ) ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್‌ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಪಕ್ಕದ ಚರಂಡಿಗೆ ಸರಿದ ಘಟನೆಯೊಂದು ನಡೆದಿತ್ತು. ಸರಿ ಸುಮಾರು 4.30 ಕ್ಕೆ ಈ ಅಪಘಾತ ನಡೆದಿದ್ದು, ಬಸ್‌ನಲ್ಲಿ ವಿದ್ಯಾರ್ಥಿಗಳೇ ಇದ್ದಿದ್ದು, ಬಹುತೇಕ ಮಂದಿಗೆ ಗಾಯವಾಗಿತ್ತು.
ಸಾರಿಗೆ ಬಸ್‌ನ ಸ್ಟೇರಿಂಗ್ ಕಟ್ ಆಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿತ್ತು.
\
ಹಾಗಾಗಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸಾರಿಗೆ ಇಲಾಖೆಯ ನಿರ್ಲಕ್ಷ್ಯತೆಯಿಂದ ನಡೆದ ಬಸ್ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆ ವಿರುದ್ಧ ಪ್ರತಿಭಟನೆಯನ್ನು ಇಂದು ಉಜಿರೆ ಸರ್ಕಲ್ ಬಳಿ ಮಾಡಿದೆ.

ಬಸ್‌ನ ಸ್ಟೇರಿಂಗ್ ಕಟ್ ಆಗಿ ಅದರ ಕಂಡೀಷನ್ ಸರಿ ಇಲ್ಲದ ಕಾರಣ ವಿದ್ಯಾರ್ಥಿಗಳು ಮಾತ್ರವಲ್ಲದೇ ಜನರಿಗೆ ಹಾನಿಯುಂಟಾಗುವ ಘಟನೆ ನಡೆದಿದೆ. ಈ ವಿಚಾರದ ವಿರುದ್ಧ ಈಗಾಗಲೇ ವಿದ್ಯಾರ್ಥಿ ಪರಿಷತ್ ಅನೇಕ ವರ್ಷಗಳಿಂದ ಬಸ್‌ನ ಸಮಸ್ಯೆ ಸರಿ ಮಾಡಬೇಕು ಜೊತೆಗೆ ಬಸ್‌ನ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಾ ಬಂದಿದೆ.
ಆದರೆ ಇಂತಹ ಹೋರಾಟಕ್ಕೆ ಸರಕಾರ ಯಾವುದೇ ರೀತಿಯ ಬೆಲೆಯನ್ನು ಕೊಡದ ನಿಟ್ಟಿನಲ್ಲಿ ಇಂದು ಉಜಿರೆ ಸರ್ಕಲ್‌ನಲ್ಲಿ ವಿದ್ಯಾರ್ಥಿ ಪರಿಷತ್ ಹೋರಾಟಕ್ಕೆ ಮುಂದಾಗಿದೆ. ಹಾಗಾಗಿ ಹೋರಾಟ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬರಬೇಕು ಮತ್ತು ಜನರ ಸಮಸ್ಯೆಯನ್ನು ಆಲಿಸಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಜಿಲ್ಲಾ ಸಂಚಾಲಕರಾದ ಸುವಿತ್ ಶೆಟ್ಟಿ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ವಿಭಾಗ ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ್ , ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ, ತಾಲೂಕು ಸಂಚಾಲಕ ಪ್ರಾರ್ಥನ್ ಗೌಡ ಅವರು ಭಾಗವಹಿಸಿದ್ದು, ಸರಕಾರದ ಅವ್ಯವಸ್ಥೆಯ ವಿರುದ್ಧ ಧ್ವನಿಗೂಡಿಸಿದ್ದಾರೆ.
Comments are closed.