Manjamma: ಕನ್ನಡ ಸರಿಗಮಪ ಶೋ ನ ಖ್ಯಾತ ಗಾಯಕಿ ವಿಧಿವಶ

Manjamma: ಸರಿಗಮಪ ಖ್ಯಾತಿಯ ಮಂಜಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ನಿಧನರಾಗಿದ್ದಾರೆ ಎಂದು ತಿಳದುಬಂದಿದೆ.

ಇತ್ತೀಚಿಗಷ್ಟೇ ಸರಿಗಮಪ ಶೋನ ಜ್ಯೂರಿ ಮೆಂಬರ್‌ ಕನ್ನಡ ಸಂಗೀತ ಲೋಕದ ದಿಗ್ಗಜ, ಬಹು ವಾದ್ಯ ಪರಿಣಿತರಾದ ಎಸ್. ಬಾಲಿ ಅವರು ನಿಧನರಾಗಿದ್ದರು. ಈ ಬೆನ್ನಲ್ಲೇ ಇದೀಗ ಮಂಜಮ್ಮ ನಿಧನ ಆಗಿರಬಹುದು ಇನ್ನು ದುಃಖ ತಂದಿದೆ.

ಅಂದಹಾಗೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಮಧುಗಿರಿಯ ಅಂಧ ಸಹೋದರಿಯರಾದ ಮಂಜಮ್ಮ ಹಾಗೂ ರತ್ನಮ್ಮ ತಮ್ಮ ಕಂಠಸಿರಿಯ ಮೂಲಕ ಜನರ ಮನಗೆದ್ದಿದ್ದರು. ಜೋಡಿಯಾಗಿ ಹಾಡಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. ಕಡು ಬಡತನದಲ್ಲಿದ್ದ ಈ ಸೋದರಿಯರು ದೇವಸ್ಥಾನದಲ್ಲಿ ಹಾಡುಗಳನ್ನು ಹಾಡಿ ಹಣ ಸಂಗ್ರಹಿಸುತ್ತಿದ್ದರು. ಮಂಜಮ್ಮ ಹಾಗೂ ರತ್ನಮ್ಮ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದವು.

Comments are closed.