Mouni Amavasya: ಇಂದು ಮೌನಿ ಅಮವಾಸೆ, ಸಂಜೆಯೊಳಗೆ ತಪ್ಪದೇ ಈ ಒಂದು ಕೆಲಸ ಮಾಡಿ

Mouni Amavasya: ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ (Prayag Raj) ಮಹಾಕುಂಭವನ್ನು (Maha Kumbh Mela) ಆಯೋಜಿಸಲಾಗುತ್ತದೆ. ಆದರೆ ಈ ಬಾರಿಯ ಮಹಾಕುಂಭಮೇಳ ಬಹಳ ವಿಶೇಷವಾಗಿದ್ದು, 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿ ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಆಗಮಿಸುತ್ತಿದ್ದಾರೆ. ಮಹಾಕುಂಭಮೇಳ ಕೇವಲ ಉತ್ಸವ ಮಾತ್ರವಲ್ಲ, ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ.

ಅಂದಹಾಗೆ ಈ ಮಹಾಕುಂಭದಲ್ಲಿ ಅಮೃತ ಸ್ನಾನ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಮೊದಲ ಅಮೃತ ಸ್ನಾನವನ್ನು ಮಕರ ಸಂಕ್ರಾಂತಿಯಂದು ಅಂದರೆ ಜನವರಿ 14 ರಂದು ನಡೆದಿದೆ. ಇದೀಗ ಎರಡನೇ ಅಮೃತ ಸ್ನಾನ ಮೌನಿ ಅಮವಾಸ್ಯೆಯ ದಿನದಂದು ನಡೆಯಲಿದೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಹೀಗಾಗಿ ನೀವು ಮನೆಯಲ್ಲಿ ಇದ್ದುಕೊಂಡು ಸಂಜೆಯೊಳಗೆ ಈ ಕೆಲಸವನ್ನು ಮಾಡಿ.

ಅಮೃತ ಸ್ನಾನವು ದಾನದಷ್ಟೇ ಮುಖ್ಯವಾಗಿದೆ. ಅದೇ ರೀತಿ ಅಮವಾಸ್ಯೆಯ ಸಂಜೆಗೂ ವಿಶೇಷ ಮಹತ್ವವಿದೆ. ಈ ವರ್ಷ ಮೌನಿ ಅಮವಾಸ್ಯೆಯಂದು ಮಹಾ ಕುಂಭದ ಎರಡನೇ ಅಮೃತ ಸ್ನಾನ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದ ಮಹತ್ವವು ಹೆಚ್ಚಾಗುತ್ತದೆ. ಇದಲ್ಲದೆ, ಈ ದಿನದಂದು ಪೂರ್ವಜರಿಗೆ ದೀಪ ಹಚ್ಚುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ನಂಬಲಾಗಿದೆ.

ಮೌನಿ ಅಮಾವಾಸ್ಯೆಯಂದು ಪೂರ್ವಜರ ಆಶೀರ್ವಾದ ಪಡೆಯಲು, ಸೂರ್ಯಾಸ್ತದ ನಂತರ ಮಣ್ಣಿನ ದೀಪಕ್ಕೆ ಸಾಸಿವೆ ಅಥವಾ ಎಳ್ಳೆಣ್ಣೆ ಸೇರಿಸಿ ದೀಪ ಹಚ್ಚಿ. ಮನೆಯ ಹೊರಗೆ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಇಡಿ. ಇಡೀ ರಾತ್ರಿ ದೀಪ ಉರಿಯಲಿ. ಇದಲ್ಲದೆ ಮನೆಯಲ್ಲಿ ಪೂರ್ವಜರ ಚಿತ್ರವಿದ್ದರೆ ಅದರ ಮುಂದೆಯೂ ದೀಪವನ್ನು ಹಚ್ಚಬಹುದು.ಈ ದಿನ ಪ್ರದೋಷ ಕಾಲವು ಸಂಜೆ 5.58 ರವರೆಗೆ ಇರುತ್ತದೆ. ಈ ಸಮಯದಲ್ಲಿ ಪೂರ್ವಜರಿಗೆ ದೀಪವನ್ನು ಹಚ್ಚುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.

ಮೌನಿ ಅಮಾವಾಸ್ಯೆಯಂದು, ಪೂರ್ವಜರಿಗೆ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು, ಏಕೆಂದರೆ ಅದು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂದು ಹೇಳಲಾಗುತ್ತದೆ.

Comments are closed.