Putturu: 10 ವರ್ಷಗಳ ಹಿಂದಿನ ಪೋಕ್ಸೋ ಪ್ರಕರಣ – ಠಾಣೆಗೆ ಬಂದು ಶರಣಾದ ಆರೋಪಿ ಸಂಶುದ್ದೀನ್!!

Putturu : ಹತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯು ಬಂದು ಪುತ್ತೂರು ಮಹಿಳಾ ಠಾಣೆಗೆ ಬಂದು ಶರಣಾದ ಘಟನೆ ನಡೆದಿದೆ.

ಹೌದು, ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ಸಂಶುದ್ದೀನ್ ಎಂಬ ಆರೋಪಿ ಪುತ್ತೂರು ಮಹಿಳಾ ಠಾಣೆಗೆ ಬಂದು ಶರಣಾದ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?
ಪ್ರಸ್ತುತ 15 ವರ್ಷ ಪ್ರಾಯದ ಹುಡುಗಿ. ಆಕೆ 5 ವರ್ಷದ ಬಾಲಕಿ ಇದ್ದಾಗ ಶಾಲೆಗೆ ಹೋಗುತ್ತಿರುವ ಬಾಲಕಿ ವರ್ಷದ ಹಿಂದೆ ತನ್ನ ನಿಕಟ ಸಂಬಂಧಿಕರ ಜತೆ ಕೇರಳಕ್ಕೆ ಹೋಗಿದ್ದು, ಅಲ್ಲಿದ್ದಾಗ ಮಾನಸಿಕವಾಗಿ ಕುಗ್ಗಿದ್ದಳು. ಈ ಸಂದರ್ಭ ಆಕೆಯನ್ನು ವೈದ್ಯಕೀಯ ಕೌನ್ಸೆಲಿಂಗ್ ಮಾಡಿದಾಗ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಳು.
ಈ ವಿಚಾರವನ್ನು ಕೇರಳ ಪೊಲೀಸರ ಗಮನಕ್ಕೆ ತರಲಾಗಿತ್ತು. ತಿರುವನಂತಪುರ ಪೊಲೀಸರು ಪ್ರಕರಣವನ್ನು ಪುತ್ತೂರು ಮಹಿಳಾ ಠಾಣೆಗೆ ಹಸ್ತಾಂತರಿಸಿದ್ದರು. ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ನಡೆಸಲಾಗುತ್ತಿತ್ತು. ಇದೀಗ ಆರೋಪಿ ಶರಣಾಗಿದ್ದಾನೆ.
Comments are closed.