Hubballi: ಹೆಂಡತಿಯ ಕಾಟ ತಾಳಲಾರದೆ ಗಂಡ ಆತ್ಮಹತ್ಯೆ; ಶವಪೆಟ್ಟಿಗೆಯಲ್ಲಿ ಪ್ರಿಂಟ್‌

ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಪತ್ನಿಯ ಕಾಟದಿಂದ ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಪತಿಯರ ಸಂಖ್ಯೆಗಳು ಹೆಚ್ಚುತ್ತಿದೆ. ಪತ್ನಿ ಕಿರುಕುಳದಿಂದ ಬೇಸತ್ತು ಪತಿಯೋರ್ವ ಆತ್ಮಹತ್ಯೆ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.

ಡೆತ್‌ನೋಟು ಬರೆದಿರುವ ಪತಿ 40 ವರ್ಷದ ಪೀಟರ್‌ ಸ್ಯಾಮುಯೆಲ್‌ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

ಪತ್ನಿ ಪಿಂಕಿ ನಡುವೆ ಜಗಳ ಕೆಲವು ದಿನಗಳಿಂದ ನಡೆಯುತ್ತಿತ್ತು. ಹೀಗಾಗಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪತ್ನಿ ಪಿಂಕಿ 20 ಲಕ್ಷ ಜೀವನಾಂಶಕ್ಕೆ ಒತ್ತಾಯ ಮಾಡುತ್ತಿದ್ದಳು.

ಪೀಟರ್‌ ಸಾಯುವ ಮೊದಲು ಡೆತ್‌ನೋಟು ಬರೆದಿದ್ದು, ಡ್ಯಾಡಿ ಆಯಮ್‌ ಸಾರಿ, ಪಿಂಕಿ (ಹೆಂಡತಿ) ಇಸ್‌ ಕಿಲ್ಲಿಂಗ್‌ ಮೀ, ಸೀ ವಾಂಟ್‌ ಮೈ ಡೆಥ್‌ ಎಂದು ಡೆತ್‌ನೋಟಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನು ಪೀಟರ್‌ ಸಂಬಂಧಿಕರು, ಶವ ಸಂಸ್ಕಾರ ಪೆಟ್ಟಿಗೆ ಮೇಲೆ ಹೆಂಡತಿ ಕಾಟ ತಾಳಲಾರದೆ ಸತ್ತನು ಎಂದು ಬರೆದಿದ್ದಾರೆ.

Comments are closed.