Hanumantu: ಹನುಮಂತು ಬಿಗ್ ಬಾಸ್ ಗೆದ್ದು ಬರುತ್ತಿದ್ದಂತೆ ಪ್ರೀತಿಸಿದ ಹುಡುಗಿ ಮಾಡಿದ್ದೇನು ಗೊತ್ತಾ?

Hanumantu: ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಆಗಿ ಹನುಮಂತು ಹರಹಮ್ಮಿದ್ದಾರೆ. ಈ ಮೂಲಕ ನಾಡಿನ ಅನೇಕ ಮಂದಿಯ ಬೇಡಿಕೆ ಈಡೇರಿದೆ. ಮುಗ್ಧ ಮನಸ್ಸಿನ ಹುಡುಗನಿಗೆ ಅದೃಷ್ಟ ಒಲಿದಿದೆ. ಹನುಮಂತು(Hanumantu) ಊರಿನಲ್ಲಿಯೂ ಕೂಡ ಸಂಭ್ರಮ ಮನೆ ಮಾಡಿದೆ. ಈ ಬೆನ್ನಲ್ಲೇ ಟ್ರೋಫಿ ಗೆದ್ದು ಹನುಮಂತು ಊರಿಗೆ ಹೋಗುತ್ತಿದ್ದಂತೆ ಅವರ ಪ್ರೀತಿಯ ಹುಡುಗಿ ಏನು ಮಾಡಿದಳು ಗೊತ್ತಾ?
ಹನುಮಂತು ಅವರು ಬಿಗ್ ಬಾಸ್ ಮನೆ ಒಳಗೆ ಇದ್ದಂತಹ ಸಂದರ್ಭದಲ್ಲಿ ತಮ್ಮ ಪ್ರೀತಿಯ ವಿಚಾರವಾಗಿ ಆಗಾಗ ಮಾತನಾಡುತ್ತಿದ್ದರು. ತಮ್ಮ ಪ್ರಿಯತಮೆಯ ಕುರಿತು ಮನೆ ಮಂದಿಗೆಲ್ಲ ತಿಳಿಸುತ್ತಿದ್ದರು. ಈ ವಿಚಾರವಾಗಿ ಕಿಚ್ಚ ಸುದೀಪ್ ಅವರು ಅನೇಕ ಬಾರಿ ಕಾಲೆಳಿದ್ದಾರೆ. ಇದೀಗ ಟ್ರೋಫಿಂಗ್ ಇದ್ದು ಪ್ರೆಸ್ ಮೀಟ್ ಎದುರಿಸುತ್ತಿರುವ ಹನುಮಂತ ತಾನು ವಿನ್ ಆಗಿದ್ದಕ್ಕೆ ತನ್ನ ಪ್ರಿಯತಮೆ ಏನು ಮಾಡಿದಳು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಹೌದು ಪ್ರೆಸ್ ಮೀಟಿನಲ್ಲಿ ಮಾಧ್ಯಮದವರು ಒಬ್ಬರು ನೀವು ಗೆದ್ದಿದ್ದಕ್ಕೆ ನಿಮ್ಮ ಹುಡುಗಿ ಪ್ರತಿಕ್ರಿಯೆ ಹೇಗಿತ್ತು ಎಂದು ಪ್ರಶ್ನಿಸಿದ್ದಕ್ಕೆ ‘ನಾನು ಹೋಗುತ್ತಿದ್ದಂತೆ ಆಕೆ ಕಣ್ಣೀರು ಹಾಕಿದಳು, ನನ್ನನ್ನು ನೋಡಿ ಅತ್ತಳು. ಆಗ ನಾನು ಅಳಬೇಡ ಸುಮ್ಮನಿರು ಈಗ ನಾನು ಬಂದಿದ್ದೇನೆ ನಿನ್ನೊಟ್ಟಿಗೆ ಇರುತ್ತೇನೆ ಎಂದು ಸಮಾಧಾನ ಮಾಡಿದೆ’ ಎಂಬುದಾಗಿ ಹೇಳಿದ್ದಾರೆ.
Comments are closed.