BBK11: ಗ್ರ್ಯಾಂಡ್ ಫಿನಾಲೆ ನಂತರ ಕಾಣೆಯಾದ ವಿನ್ನರ್ ಹನುಮಂತು ಪ್ರತ್ಯಕ್ಷ; ಬಿಗ್‌ಬಾಸ್‌ನಲ್ಲಿ ಗೆದ್ದ ಹಣದಲ್ಲಿ ಏನು ಮಾಡ್ತಾರೆ ಗೊತ್ತಾ?

BBK 11: ಬಿಗ್‌ಬಾಸ್ ಸೀಸನ್ 11 ರ ವಿನ್ನರ್ ಹನುಮಂತ ಅವರು ಗ್ರ್ಯಾಂಡ್ ಫಿನಾಲೆಯಲ್ಲಿ ಯಾರ ಕಣ್ಣಿಗೂ ಕಾಣದೆ ಮಾಯವಾಗಿದ್ದರು. ಎಲ್ಲರೂ ಎಲ್ಲಿ ವಿನ್ನರ್ ವಿನ್ನರ್? ಎಂದು ಹುಡುಕಾಡಿದಾಗ ಇದೀಗ ಬಿಗ್‌ಬಾಸ್ ತಂಡದ ಸುದ್ದಿಗೋಷ್ಠಿಯಲ್ಲಿ ಹನುಮಂತ ಜೊತೆಗೆ ರಜತ್, ತ್ರಿವಿಕ್ರಂ ಅವರು ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿನ್ನರ್ ಹನುಮಂತು ನಾನು ಎಲ್ಲಿ ಹೋದ ಎಲ್ಲಿ ಹೋದ ಎಂಬ ಪ್ರಶ್ನೆ ಕೇಳಿದಾಗ, ನಾನು ಮಲಗಿದ್ದೆ ಈಗ ಬಂದೆ ಎಂದು ಉತ್ತರ ನೀಡಿದ್ದಾರೆ.
ಬಿಗ್‌ಬಾಸ್ ಫಿನಾಲೆ ಮುಗಿದ ನಂತರ ಮಲಗಿದ್ದು, ಲೇಟ್ ಎದ್ದಿದ್ದೀನಿ. ಹೀಗಾಗಿ ಯಾರಿಗೂ ನಾನು ಸಿಗಲಿಲ್ಲ. ಬೇಜಾರ್ ಮಾಡ್ಕೊಳ್ಳಬೇಡಿ. ನನ್ನನ್ನು ಗೆಲ್ಲಿಸಿದ್ದಕ್ಕೆ ಹನುಮಂತು ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.
ನನಗೆ ಕಪ್ ಗೆಲ್ಲುವ ನಂಬಿಕೆ ಇರಲಿಲ್ಲ. ನಮ್ಮ ಸ್ನೇಹಿತರು ಸುದೀಪ್ ಸರ್ ಇರೋದ್ರೊಳಗೆ ಇದ್ದಾರೆ ಬಿಗ್‌ಬಾಸ್ ಮನೆಗೆ ಹೋಗು ಎಂದು ಹೇಳಿದರು. ಹೀಗಾಗಿ ಸೀಸನ್‌ಗೆ ನಾನು ಬಂದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಗೆದ್ದ ಹಣವನ್ನು ಏನು ಮಾಡುತ್ತೇವೆ ಅನ್ನೋ ಪ್ರಶ್ನೆಗೂ ಉತ್ತರಿಸಿದ್ದಾರೆ. ಈಗ ಇರುವ ತಗಡಿನ ಮನೆಯನ್ನು ರಿಪೇರಿ ಮಾಡುತ್ತೇನೆ. ಆಮೇಲೆ ಮದುವೆ ಆಗುತ್ತೇನೆ. ಈ ಎರಡು ಆಸೆ ನನ್ನದು ಎಂದು ಹನುಮಂತು ಹೇಳಿದ್ದಾರೆ.
ಇದರ ಜೊತೆ ಇತ್ತ ಹನುಮಂತು ಗೆದ್ದ ಖುಷಿಯಲ್ಲಿ ಇರುವ ಗ್ರಾಮಸ್ಥರು ಆತ ಶೀಘ್ರದಲ್ಲೇ ಮದುವೆ ಆಗಲಿದ್ದಾನೆ ಎಂದು ಹೇಳಿದ್ದಾರೆ. ಮುಂದಿನ 3-4 ತಿಂಗಳಲ್ಲಿ ಹನುಮಂತ ಮದುವೆ ಮಾಡಿಕೊಳ್ಳುತ್ತಾನೆ ಎಂದು ಹೇಳಿದ್ದಾರೆ.
Comments are closed.