Bengaluru: ಹುಟ್ಟುಹಬ್ಬ ಆಚರಿಸಿ ವಾಪಸು ಬರುತ್ತಿದ್ದಾಗ ಹಿಂಬದಿಯಿಂದ ಗುದ್ದಿದ ಐಷರ್ ಟ್ರಕ್; ಪ್ರಾಣ ಬಿಟ್ಟ ಬಾಲಕ
Bengaluru: ಬೆಂಗಳೂರಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಕಳೆದ ರಾತ್ರಿ ಅಪಘಾತವೊಂದು ಸಂಭವಿಸಿದ್ದು, ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ. ತನ್ನ ಹುಟ್ಟುಹಬ್ಬದಂದೇ ಸಾವಿನ ಹಾದಿ ಹಿಡಿದಿದ್ದಾನೆ.
ಭಾನು ತೇಜ (12) ಮೃತ ಬಾಲಕ.
ರವಿ ಹಾಗೂ ಸುಮಾ ಆಂಧ್ರ ಪ್ರದೇಶದ ಚಿತ್ತೂರು ಮೂಲದವರು. ಇವರು ಪುತ್ರ ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯುತ್ತಿದ್ದ. ಶನಿವಾರ ಭಾನು ತೇಜನ ಹುಟ್ಟುಹಬ್ಬ ಇದ್ದಿದ್ದರಿಂದ ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿದ್ದ. ಹುಟ್ಟು ಹಬ್ಬ ಆಚರಣೆ ಬಳಿಕ ರಾತ್ರಿ 11.20ರ ಸುಮಾರಿಗೆ ಅಣ್ಣ ಚಕ್ರಧರಣ್ ಜೊತೆ ಬೈಕ್‌ನಲ್ಲಿ ವಾಪಸ್ ಆರ್‌ಟಿ ನಗರದತ್ತ ಹೋಗುತ್ತಿದ್ದಾಗ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಐಷರ್ ಟ್ರಕ್‌ವೊಂದು ಹಿಂಬದಿಯಿಂದ ಭಾನು ತೇಜ್ ಇದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಭಾನು ತೇಜ್ ಕೂಡಲೇ ಕೆಳಗೆ ಬಿದ್ದಿದ್ದು, ತಲೆಯ ಮೇಲೆ ಟ್ರಕ್‌ನ ಎರಡು ಚಕ್ರಗಳು ಹರಿದಿದೆ. ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಬಾಲಕ. ಚಕ್ರಧರಣ್‌ಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಹೆಣ್ಣೂರು ಟ್ರಾಫಿಕ್ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
Comments are closed, but trackbacks and pingbacks are open.