Actor Darshan: ನಟ ದರ್ಶನ್‌ಗೆ ಮತ್ತೊಂದು ಶಾಕ್‌ ನೀಡಿದ ಪೊಲೀಸರು; ಗನ್‌ ಲೈಸೆನ್ಸ್‌ ರದ್ದು

Actor Darshan: ನಟ ದರ್ಶನ್‌ಗೆ ಪೊಲೀಸರು ಮತ್ತೊಂದು ಶಾಕಿಂಗ್‌ ನ್ಯೂಸ್‌ ನೀಡಿದ್ದಾರೆ. ದರ್ಶನ್‌ಗೆ ಗನ್‌ ಲೈಸೆನ್ಸ್‌ ರದ್ದು ಮಾಡಿ ಪೊಲೀಸ್‌ ಇಲಾಖೆ ಮುಂದಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್‌ ಜಾಮೀನು ಅರ್ಜಿ ರದ್ದು ಮಾಡಲು ಪೊಲೀಸರು ಸುಪ್ರೀಂಕೋರ್ಟ್‌ಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ ಇದೀಗ ಗನ್‌ ಲೈಸೆನ್ಸ್‌ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ.

ಕೊಲೆ ಪ್ರಕರಣದ ಆರೋಪಿಯಾಗಿರುವ ಕಾರಣ, ಜಾಮೀನಿನ ಮೇಲೆ ಹೊರಗಿರುವ ಕಾರಣ ಸಾಕ್ಷಿಗಳ ಮೇಲೆ ಪ್ರಭಾಗ ಬೀರುವ ಸಾಧ್ಯತೆಯಿದೆ. ಹಾಗಾಗಿ ಲೈಸೆನ್ಸ್‌ ರದ್ದುಪಡಿಸಬೇಕಾಗಿದೆ ಎಂದು ಪೊಲೀಸರು ನೋಟಿಸ್‌ ನೀಡಿರುವ ಕುರಿತು ವರದಿಯಾಗಿದೆ.

Comments are closed.