Chikkamagaluru: ಹಾಯಾಗಿ ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯನ್ನು ಎತ್ತಿ ಬಿಸಾಡಿದ ಸಲಗ

Chikkamagaluru: ಮಲಗಿದ್ದ ವ್ಯಕ್ತಿಯನ್ನು ಕಾಡಾನೆಯೊಂದು ಎತ್ತಿ ಬಿಸಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ. ಜ.12 ರ ಮುಂಜಾನೆ ಮನೆಯ ಹೊರಗೆ ಮಲಗಿದ್ದ ನಾರಾಯಣ ಗೌಡ ಅವರನ್ನು ಕಾಡಾನೆ ಎತ್ತಿ ಬಿಸಾಡಿದೆ.
ಈ ಘಟನೆಯಿಂದ ಇವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಲ್ದೂರು ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಮನೆಯ ಹೊರಭಾಗದಲ್ಲಿ ಮಲಗಿದ್ದ ನಾರಾಯಣ ಗೌಡ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ್ದ ವೇಳೆ ಅವರು ಸೀದಾ ಹೋಗಿ ಹುಲ್ಲಿನ ರಾಶಿಯ ಮೇಲೆ ಬಿದ್ದ ಪರಿಣಾಮ ಹೆಚ್ಚಿನ ಅನಾಹುತ ಆಗಿಲ್ಲ.
ವಿಷಯ ತಿಳಿದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆನೆ ದಾಳಿ ನೋಡಿ ಊರಿನ ಜನರು ಬೆಚ್ಚಿಬಿದ್ದು, ಆನೆಯನ್ನು ಗ್ರಾಮದಿಂದ ಸ್ಥಳಾಂತರ ಮಾಡಲು ಜನರು ಹೆಚ್ಚಿನ ಆಗ್ರಹ ಮಾಡಿದ್ದಾರೆ.
Comments are closed.