Kasaragod: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದಾರುಣ ಸಾವು

Kasaragod: ಎರಡು ವರ್ಷದ ಪುಟ್ಟ ಮಗುವೊಂದು ಪಿಸ್ತಾದ ಸಿಪ್ಪೆ ತಿಂದು ಗಂಟಲಲ್ಲಿ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ. ಗಲ್ಫ್ ದೇಶದಿಂದ ಅಪ್ಪ ತಂದಿದ್ದ ಪಿಸ್ತದ ಸಿಪ್ಪೆಯೊಂದು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದು, ಮಗು ಉಸಿರಾಡಲು ತೊಂದರೆ ಅನುಭವಿಸಿ, ಸಾವಿಗೀಡಾದ ಘಟನೆಯೊಂದು ಕುಂಬಳೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಎಂಬ ಎರಡು ವರ್ಷದ ಮಗುವೇ ಸಾವಿಗೀಡಾಗಿದ್ದು. ಅನಾಸ್ ಪಿಸ್ತಾವನ್ನ ತಿನ್ನುತ್ತಿದ್ದಾಗ, ಸಿಪ್ಪೆ ಗಂಟಲಿನಲ್ಲಿ ಸಿಲುಕಿದೆ. ಮನೆಯವರು ಕೂಡೇ ಸಿಪ್ಪೆಯ ಒಂದು ತುಂಡನ್ನು ತೆಗೆದು ನಂತರ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ಸಂದರ್ಭದಲ್ಲಿ ಗಂಟಲಿನಲ್ಲಿ ಯಾವುದೇ ವಸ್ತು ದೊರಕಿಲ್ಲ ಎಂದು ಹೇಳಿದ್ದರಿಂದ ಮನೆಗೆ ವಾಪಾಸು ಕರೆದುಕೊಂಡು ಬಂದಿದ್ದಾರೆ.
ಆದರೆ ಆದಿತ್ಯವಾರ (ಇಂದು) ಮಗುವಿಗೆ ಉಸಿರಾಟದ ತೊಂದರೆ ಆಗಿದೆ. ಕೂಡಲೇ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಸಾವಿಗೀಡಾಗಿದೆ ಎಂದು ವರದಿಯಾಗಿದೆ.
ತಂದೆ ಅನ್ವರ್ ಅವರು ಗಲ್ಫ್‌ಗೆ ಒಂದು ವಾರದ ಹಿಂದಷ್ಟೇ ಹೋಗಿದ್ದು, ಮಗುವಿನ ಸಾವಿನ ಸುದ್ದಿ ಕೇಳಿ ವಾಪಾಸು ಬಂದಿದ್ದಾರೆ.
Comments are closed.