Parliment Election : ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಿವು !!

Parliment Election : ದೇಶದಲ್ಲಿ ಲೋಕಸಭಾ ಚುನಾವಣೆ ಹಂತ ಹಂತವಾಗಿ ನೆರವೇರುತ್ತಿದೆ. ಇದೀಗ ಕರ್ನಾಟಕ(Karmataka)ದಲ್ಲಿ ನಯಬೇಕಿದ್ದ ಎರಡು ಹಂತಗಳ ಚುನಾವಣೆಯು ಮುಕ್ತಾಯವಾಗಿದ್ದು ರಾಜ್ಯದ ನಾಯಕರು ರಿಲೀಫ್ ಮೂಡ್ ನಲ್ಲಿ ಇದ್ದಾರೆ. ಅಲ್ಲದೆ ಫಲಿತಾಂಶದ ಲೆಕ್ಕಾಚಾರವನ್ನು ಮಾಡುತ್ತಿದ್ದಾರೆ. ಅದರಲ್ಲೂ ಒಂದು ಕಾಲದಲ್ಲಿ ದೇಶವನ್ನಾಳಿ, ವೈಭವೀಕರಿಸಿದ್ದ ಕಾಂಗ್ರೆಸ್ ಇಂದು ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದೆ. ಹೀಗಾಗಿ ಕಾಂಗ್ರೆಸ್ ಈ ಸಲ ಎಷ್ಟು ಸ್ಥಾನ ಗೆಲ್ಲಬಹುದು ? ಎರಡಂಕಿ ಸ್ಥಾನ ಪಡೆಯಬಹುದೇ? ಎಂಬ ಚರ್ಚೆ ಮುನ್ನಲೆಗೆ ಬಂದಿದೆ.

ಹೌದು, 2019 ರ ಲೋಕಸಭಾ ಚುನಾವಣೆಯಲ್ಲಿ(Parliament Election ) ಕಾಂಗ್ರೆಸ್‌ ಕೇವಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಹೈಕಮಾಂಡ್‌ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್‌ ನೀಡಿದೆ. ಅದರಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳನ್ನ ನೀಡುವ ಮೂಲಕ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಜೊತೆಗೆ ಬಿಜೆಪಿಯಂತೆ ಕಾಂಗ್ರೆಸ್ ಗೂ ಕೂಡ ದಕ್ಷಿಣ ಭಾರತದಲ್ಲಿ(South India)ಕರ್ನಾಟಕವೇ ಭದ್ರ ನೆಲೆಯಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಹಾಗೂ ಡಿಕೆ ಶಿವಕುಮಾರ್‌(DK Shivkumar)ಅವರು ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಜವಾಬ್ದಾರಿ ನೀಡಿದೆ.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಸುಲಭವಾಗಿ ಏಳರಿಂದ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿದು ಬಂದಿದೆ. ಆದರೂ ಕೂಡ ಮೋದಿ ಅಲೆಯ ಮುಂದೆ ಕಾಂಗ್ರೆಸ್ ಆಟ, ಗ್ಯಾರಂಟಿ ಆಟ ನಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ.

ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸುಲಭ?

* ಚಾಮರಾಜನಗರ

* ಚಿತ್ರದುರ್ಗದ

* ಕಲಬುರಗಿ

* ಕೊಪ್ಪಳ ‌

* ಬೆಳಗಾವಿ

* ಚಿಕ್ಕೋಡಿ – ( 50 – 50 )

* ದಾವಣಗೆರೆ – ( 50 -50 )

* ಬೆಂಗಳೂರು ಗ್ರಾಮಾಂತರ- (50-50)

BJP-JDS ಲೆಕ್ಕಾಚಾರ ಏನು?

ಬಿಜೆಪಿ ಕೂಡ ತನ್ನ ಗೆಲುವಿನ ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದು, ಪಕ್ಷದ ಆಂತರಿಕ ಸಭೆ ನಡೆಸಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ಯಾರೂ ಕೂಡ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಸೋಲುವ ಭೀತಿಯನ್ನು ವ್ಯಕ್ತಪಡಿಸಿಲ್ಲ. ಆದರೆ 2019ರ ಚುನಾವಣೆಗೆ ಹೋಲಿಸಿದರೆ ಮತಗಳ ಅಂತರದಲ್ಲಿ ವ್ಯತ್ಯಾಸವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಕೂಡ ಎಲ್ಲಾ ಸಮೀಕ್ಷೆಗಳ ಮೂಲಕ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಪ್ರತಿಯೊಬ್ಬ ಶಾಸಕರಿಂದಲೇ ಅವರ ಕ್ಷೇತ್ರದ ಮುನ್ನಡೆ, ಹಿನ್ನಡೆ ಸಾಧ್ಯತೆಯ ಮಾಹಿತಿ ಪಡೆಯಲಾಗಿದೆ.

Leave A Reply

Your email address will not be published.