Beautician women: ನಾಪತ್ತೆಯಾದ ಬ್ಯೂಟಿಶಿಯನ್ ಮೃತದೇಹ ಹಲವು ತುಂಡುಗಳಾಗಿ ಪತ್ತೆ!
				
Beautician woman: ಮನುಷ್ಯ ಕೆಲವೊಮ್ಮೆ ತಮ್ಮ ಸ್ವಾರ್ಥಕ್ಕಾಗಿ ಮೃಘಗಳಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಬ್ಯೂಟಿ ಪಾರ್ಲರ್ ಮಹಿಳೆ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

ಹೌದು, ಬ್ಯೂಟಿ ಪಾರ್ಲರ್ ಶಾಪ್ ಮಹಿಳೆ (Beautician woman) ಪಾರ್ಲರ್ ಶಾಪ್ ಮುಚ್ಚಿ ಮನೆಗೆ ತೆರಳಿದ್ದಾಳೆ. ಆದರೆ ಮಹಿಳೆ ಮನೆ ತಲುಪಿಲ್ಲ. ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಇದೀಗ ಪತ್ತೆಯಾಗಿದೆ. ಅಲ್ಲದೇ ಮಹಿಳೆ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಜೋಧಪುರ ನಿವಾಸಿ ಅನಿತಾ ದೇವಿ(50) ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು.ಈ ನಡುವೆ ಅಕ್ಟೋಬರ್ 28 ರಂದು ಸಂಜೆಯಾಗುತ್ತಿದ್ದಂತೆ ಅನಿತಾ ದೇವಿ ಬ್ಯೂಟಿ ಪಾರ್ಲರ್ ಶಾಪ್ ಮುಚ್ಚಿದ್ದಾರೆ. ಬಳಿಕ ಮನೆಗೆ ಹೊರಟಿದ್ದಾರೆ. ಆದರೆ ಮನೆಗೆ ಮಾತ್ರ ತಲುಪಿಲ್ಲ.
ರಾತ್ರಿಯಾದರೂ ಪತ್ನಿ ಅನಿತಾ ದೇವಿ ಮನಗೆ ಆಗಮಿಸಿದ ಕಾರಣ ಅನುಮಾನಗೊಂಡ ಪತಿ ಮನ್‌ಮೋಹನ್ ಚೌಧರಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಕೆಲ ಸುಳಿವು ಪತ್ತೆ ಹಚ್ಚಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅನಿತಾ ದೇವಿ ಆಟೋ ರಿಕ್ಷಾ ಮೂಲಕ ಮನೆಗೆ ತೆರಳಲು ಮುಂದಾಗಿರುವುದು ಪತ್ತೆಯಾಗಿದೆ. ಆಟೋ ಚಾಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅನಿತಾ ದೇವಿಯನ್ನು ಗಂಗಾನಾ ವಲಯಕ್ಕೆ ಬಿಟ್ಟಿರುವುದಾಗಿ ಹೇಳಿದ್ದಾನೆ. ಇಷ್ಟೇ ಅಲ್ಲ ಈ ಹತ್ಯೆ ಹಿಂದಿನ ಮಹತ್ವದ ಸುಳಿವು ನೀಡಿದ್ದಾನೆ.
ಅನಿತಾ ದೇವಿ ಬ್ಯೂಟಿ ಪಾರ್ಲರ್ ಶಾಪ್ ಇದ್ದ ಕಟ್ಟಡದಲ್ಲೇ ಅಂಗಡಿ ಇಟ್ಟಿದ್ದ ಮೊಹಮ್ಮದ್ ಗುಲಾಮುದ್ದೀನ್ ಅಲಿಯಾಸ್ ಗುಲ್ ಮೊಹಮ್ಮದ್ ತನ್ನ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿದೆ. ಮಹೊಮ್ಮದ್ ಕೃತ್ಯ ಕುರಿತು ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಸದ್ಯ ಮೊಹಮ್ಮದ್‌ನ ಅರೆಸ್ಟ್ ಮಾಡಿದ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
			