Gautham Gambhir: ವಂಚನೆ ಪ್ರಕರಣ; ಟೀಮ್‌ ಇಂಡಿಯಾ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ತನಿಖೆಗೆ ಆದೇಶ

Share the Article

Gautham Gambhir: ರಿಯಲ್‌ ಎಸ್ಟೇಟ್‌ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಹೊಸ ತನಿಖೆಗೆ ಆದೇಶ ನೀಡಲಾಗಿದೆ. ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಪ್ರಸ್ತುತ ಕೋಚ್‌ ಆಗಿರುವ ಗೌತಮ್‌ ಗಂಭೀರ್‌ ಅವರ ಕುರಿತು ಫ್ಲಾಟ್‌ ಖರೀದಿದಾರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಹಾಗೂ ಇತರರ ಬಗ್ಗೆ ದೆಹಲಿ ನ್ಯಾಯಾಲಯವು ಹೊಸ ತನಿಖೆಗೆ ನಿರ್ದೇಶನ ನೀಡಿದೆ.

ರಿಯಲ್‌ ಎಸ್ಟೇಟ್‌ ಸಂಸ್ಥೆಗಳಾದ ರುದ್ರಾ ಬಿಲ್ಡ್‌ವೆಲ್‌ ರಿಯಾಲ್ಟಿ ಪ್ರೈವೇಟ್‌ ಲಿಮಿಟೆಡ್‌, ಎಚ್‌ ಆರ್‌ ಇನ್‌ಫ್ರಾಸಿಟಿ ಪ್ರೈವೇಟ್‌ ಲಿಮಿಟೆಡ್‌, ಯುಎಂ ಆರ್ಕಿಟೆಕ್ಚರ್ಸ್‌ ಮತ್ತು ಗುತ್ತಿಗೆದಾರರು, ಕಂಪನಿಗಳ ಜಂಟಿ ಉದ್ಯಮದ ನಿರ್ದೇಶಕ ಮತ್ತು ಬ್ರಾಂಡ್‌ ಅಂಬಾಸಿಡರ್‌ ಆಗಿದ್ದ ಗಂಭೀರ್‌ ವಿರುದ್ಧ ಆಪಾದಿತ ವಂಚನೆ ಪ್ರಕರಣವನ್ನು ದಾಖಲು ಮಾಡಲಾಗಿದೆ.

Leave A Reply

Your email address will not be published.