Home International Kim Jong Un : ಯಪ್ಪಾ.. ಕಿಮ್ ಜಾಂಗ್ ಉನ್ ‘ಸುಖ’ಕ್ಕಾಗಿ ಪ್ರತೀ ವರ್ಷ ಬೇಕು...

Kim Jong Un : ಯಪ್ಪಾ.. ಕಿಮ್ ಜಾಂಗ್ ಉನ್ ‘ಸುಖ’ಕ್ಕಾಗಿ ಪ್ರತೀ ವರ್ಷ ಬೇಕು 25 ವರ್ಜಿನ್ ಹುಡುಗಿಯರು !!

Hindu neighbor gifts plot of land

Hindu neighbour gifts land to Muslim journalist

Kim Jong Un: ಉತ್ತರ ಕೊರಿಯಾ(North Korea) ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಆಡಳಿತದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅಲ್ಲಿನ ರೀತಿ, ರಿವಾಜುಗಳು ಎಲ್ಲರಿಗೂ ಅಚ್ಚರಿಯನ್ನೇ ಉಂಟುಮಾಡುತ್ತವೆ. ಜೊತೆಗೆ ಆ ದೇಶದ ಹೆಣ್ಣು ಮಕ್ಕಳಿಗಿರುವ ಕಟ್ಟುಪಾಡುಗಳು ಜಗತ್ತಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೀಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದ್ದು ಕಿಮ್ ಜಾಂಗ್ ಉನ್(kim jong un) ಪ್ರತಿ ವರ್ಷ ತನ್ನ ಸುಖಕ್ಕಾಗಿ 25 ಮಂದಿ ವರ್ಜಿನ್ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಎಂಬುದು ಬಹಿರಂಗವಾಗಿದೆ.

ಹೌದು, ಸರ್ವಾಧಿಕಾರಿ ಕಿಮ್ ಜಾಂಗ್ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಉತ್ತರ ಕೊರಿಯಾದ ಯೊಮಿ ಪಾರ್ಕ್ ಎಂಬ ಯುವತಿ ಅಧ್ಯಕ್ಷ ಕಿಮ್ ಜಾಂಗ್ ಉನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ದೇಶದ ಸರ್ವೋಚ್ಚ ನಾಯಕ ಕಿಮ್ ಜಾಂಗ್-ಉನ್ ಪ್ರತಿವರ್ಷ ತನ್ನ ಪ್ಲೆಷರ್‌ ಸ್ಕ್ವಾಡ್ ಗೆ ಸೇರಲು 25 ಕನ್ಯೆ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಆಯ್ಕೆ ಹೇಗೆ ಮಾಡಲಾಗುತ್ತದೆ?
ಹುಡುಗಿಯರ ಸೌಂದರ್ಯ, ರಾಜಕೀಯ ಅನುಸರಣೆಯ ಮೇಲೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಅದು ಕೂಡ
ಕಿಮ್ ಜೊಂಗ್-ಉನ್, ಒಮ್ಮೆ ಕೆಲವು ಸುಂದರ ಹುಡುಗಿಯರನ್ನು ನೋಡಿದರೆ ಸಾಕು. ನಂತರ ಅವರು ಮಾಡುವ ಮೊದಲ ಕೆಲಸ ಹುಡುಗಿಯ ಕುಟುಂಬದ ಸ್ಥಿತಿ, ಹಿನ್ನೆಲೆಯನ್ನು ಪರಿಶೀಲಿಸುವುದು. ಅವರ ಕುಟುಂಬ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿದ್ದಾರಾ? ದಕ್ಷಿಣ ಕೊರಿಯಾದಲ್ಲಿ ಅಥವಾ ಇತರೇ ಯಾವುದಾದರೂ ದೇಶದಲ್ಲಿ ಸಂಬಂಧಿಗಳನ್ನು ಹೊಂದಿದ್ದಾರೆಯೇ ಅಂತ ಪರಿಶೀಲನೆ ನಡೆಸಿ ಯುವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ.

ಇಷ್ಟೇ ಅಲ್ಲದೆ ಹುಡುಗಿಯರನ್ನು ಆಯ್ಕೆ ಮಾಡಿದ ನಂತರ ಅವರು ಕನ್ಯೆಯರು ಎಂದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ . ಈ ಸಂದರ್ಭದಲ್ಲಿ ದೇಹದಲ್ಲಿ ಸಣ್ಣ ಗಾಯದಂತಹ ದೋಷ ಇದ್ದರೂ ರಿಜಕ್ಟ್ ಮಾಡಲಾಗುತ್ತದೆಯಂತೆ.

ಯಾವ ಕೆಲಸಗಳಿಗೆ ಬಳಕೆ?
ಆಯ್ಕೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಟೆಸ್ಟ್‌ನಲ್ಲಿ ಪಾಸಾದ ಕೆಲವು ಹುಡುಗಿಯರನ್ನು ಪಯೋಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರ ವಿಶೇಷ ಕೆಲಸವು ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದಾಗಿರುತ್ತದೆ. ತಂಡವನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಬ್ಬರು ಮಸಾಜ್‌ನಲ್ಲಿ ತರಬೇತಿ ಪಡೆಯುತ್ತಾರೆ. ಇನ್ನು ಕೆಲವರು ಹಾಡುಗಳು ಮತ್ತು ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಮೂರನೇಯ ತಂಡ ಸರ್ವಾಧಿಕಾರಿ ಮತ್ತು ಇತರ ಪುರುಷರೊಂದಿಗೆ ಲೈಂಗಿಕವಾಗಿ ನಿಕಟವಾಗಿರಬೇಕು.

ಅಂದಹಾಗೆ ಕಿಮ್ ಜೊಂಗ್-ಉನ್ ಖುಷಿ ಪಡಿಸಲೆಂದೇ ಇದೆ ‘ಪ್ಲೆಷರ್‌ ಸ್ಕ್ವಾಡ್’ ಎಂಬ ವಿಭಾಗವಿದ್ದು, ಸುಖ ಪಡಿಸಲು ಆಯ್ಕೆ ಆಗುವ ಹುಡುಗಿಯರಿಗಾಗಿ ಇದನ್ನು ರಚಿಸಲಾಗಿದೆ. ಈ ತಂಡದ ಹುಡುಗಿಯರಿಗೆ ಇಪ್ಪತ್ತು ವರ್ಷ ವಯಸ್ಸಾದಾಗ ಅವರ ಅಧಿಕಾರಾವಧಿಯು ಕೊನೆಗೊಳ್ಳುತ್ತದೆ. ಆ ಹುಡುಗಿಯರು ಕಿಮ್ ಜೊಂಗ್-ಉನ್ ಅಂಗರಕ್ಷಕರನ್ನು ಮದುವೆಯಾಗುತ್ತಾರೆ ಎಂದು ವರದಿಯಾಗಿದೆ.