2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ -1ರ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ, ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಈ ರೀತಿ ಸಲ್ಲಿಸಿ
2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ -1 ರ ಫಲಿತಾಂಶ ಬಂದಿದೆ. ಈ ಪರೀಕ್ಷೆ ಬರೆದು ಒಂದು ವೇಳೆ ಫಲಿತಾಂಶ ನಿಮಗೆ ಸಮಾಧಾನಕರವಾಗಿಲ್ಲದಿದ್ದಲ್ಲಿ ಪರೀಕ್ಷೆ 2 ತೆಗೆದುಕೊಳ್ಳಬಹುದು. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು, ಮರುಎಣಿಕಗೆ ಅರ್ಜಿ ಹಾಕಲು ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ವಿಷಯಗಳಿಗೆ ಮಾತ್ರ ವಿದ್ಯಾರ್ಥಿಗಳು ಮರುಮೌಲ್ಯಮಾಪನ/ಮರುಎಣಿಕೆಗೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ವಿಷಯಗಳಿಗೆ ಮರುಎಣಿಕೆಗಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಹಾಗೂ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಲು ಅವಕಾಶವಿದೆ. ಅಥವಾ ಆಫ್‌ಲೈನ್ ಚಲನ್ (ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಚಲನ್) ಈ ಮೂಲಕ ಅರ್ಜಿ ಸಲ್ಲಿಸಲು ಹೇಳಲಾಗಿದೆ.
ಇದನ್ನೂ ಓದಿ: Puttur: ತೋಟಕ್ಕೆ ಮಂಗ ಬಂದಿದೆ, ಬೇಗ ಬನ್ನಿ; ದ.ಕನ್ನಡ ಕೃಷಿಕರಿಂದ ಪೊಲೀಸರಿಗೆ ಕರೆ
ಯಾವುದಕ್ಕೆ ಎಷ್ಟು ಶುಲ್ಕ?
ಪ್ರತಿ ವಿಷಯಕ್ಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ರೂ.530.
ಪ್ರತಿ ವಿಷಯಕ್ಕೆ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ರೂ.1670.
ಅಂಕಗಳ ಮರುಎಣಿಕೆಗಾಗಿ ಶುಲ್ಕ ಇಲ್ಲ.
ಮುಖ್ಯ ದಿನಾಂಕಗಳು;
ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ : ಏಪ್ರಿಲ್ 10 ರಿಂದ 16, 2024 ರವರೆಗೆ.
ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾರಂಭ ಹಾಗೂ ಕೊನೆಯ ದಿನಾಂಕ : ಏಪ್ರಿಲ್ 14 – 19, 2024 ರವರೆಗೆ.
ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನ್ಡ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ ಇರುತ್ತದೆ) : ಏಪ್ರಿಲ್ 15-20, 2024 ರವರೆಗೆ.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು https://kseab.karnataka.gov.in/english ಕ್ಕೆ ಭೇಟಿ ನೀಡಬೇಕು.
ನಂತರ ಓಪನ್ ಆದ ಪೇಜಲ್ಲಿ ಮತ್ತಷ್ಟು ಸುದ್ದಿಗಳು ಎಂಬಲ್ಲಿಗೆ ಕ್ಲಿಕ್ ಮಾಡಿ.
ಹೊಸ ಪೇಜ್ ಕಾಣುತ್ತದೆ. ‘Click here to apply online application for Scanned copy, Revaluation, Retotalling of II PUC Exam-1 March 2024’ ಇಲ್ಲಿ ಕ್ಲಿಕ್ ಮಾಡಿ.
ಉತ್ತರ ಪತ್ರಿಕೆ, ಮರುಮೌಲ್ಯಮಾಪನ, ಮರುಎಣಿಕೆ ಯಾವುದೇ ಸೌಲಭ್ಯ ಬಯಸುವವರು ನಿಮ್ಮ ಪರೀಕ್ಷೆ-1 ರಿಜಿಸ್ಟರ್ ನಂಬರ್ ನಮೂದಿಸಿ.
ನಂತರ ಡೀಟೇಲ್ಸ್ ಕಾಣುತ್ತದೆ.
ನಿಮಗೆ ಉತ್ತರ ಪತ್ರಿಕೆ ಬೇಕಾದಲ್ಲಿ ಒಮ್ಮೆಯೇ ವಿಷಯಗಳನ್ನು ಆಯ್ಕೆ ಮಾಡಿ, ನಂತರ ಪೋಷಕರ ಮೊಬೈಲ್ ನಂಬರ್, ಇ-ಮೇಲ್ ವಿಳಾಸ ನೀಡಿ ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿದರೆ, ಶುಲ್ಕದ ಮಾಹಿತಿ ಬರುತ್ತದೆ. ನಂತರ ಮೇಕ್ ಪೇಮೆಂಟ್ ಎಂಬ ಬಟನ್ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ. ನಂತರ ನಿಮ್ಮ ಮೊಬೈಲ್ ನಂಬರ್‌ಗೆ ಸಂದೇಶ ಬರುತ್ತದೆ. ಆ ನಂಬರ್ ಬಳಸಿ ಮಂಡಲಿಯ ವೆಬ್‌ಸೈಟ್‌ನಲ್ಲಿ ಎಪ್ರಿಲ್ 14 ರಿಂದ 19ರವರೆಗೆ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಲು ಅವಕಾಶವಿರುತ್ತದೆ.
ನಂತರ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಂಡು, ಅವುಗಳಲ್ಲಿ ವ್ಯತ್ಯಾಸ ಕಂಡು ಬಂದರೆ, ಮರುಮೌಲ್ಯಮಾಪನ/ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದು.
ventolin prescription: Buy Albuterol inhaler online – order ventolin online canada
ventolin prescription canada
prednisone without prescription: cost of prednisone 40 mg – prednisone 1 mg tablet
top online pharmacy india: Indian pharmacy online – top 10 online pharmacy in india
canadadrugpharmacy com: Cheapest online pharmacy – canadian online drugstore