Puttur: ತೋಟಕ್ಕೆ ಮಂಗ ಬಂದಿದೆ, ಬೇಗ ಬನ್ನಿ; ದ.ಕನ್ನಡ ಕೃಷಿಕರಿಂದ ಪೊಲೀಸರಿಗೆ ಕರೆ

Puttur: ಚುನಾವಣೆ ಸಮಯದಲ್ಲಿ ಕೋವಿಗಳನ್ನು ಪೊಲೀಸ್‌ ಠಾಣೆಯಲ್ಲಿ ಠೇವಣಿ ಇಟ್ಟಿರುವ ಕಾರಣ ಬೆಳೆ ರಕ್ಷಣೆಗೆಂದು ಕೃಷಿಕರು ಇದೀಗ ಪೊಲೀಸರ ಹಾಗೂ ಕೋರ್ಟ್‌ ಮೊರೆ ಹೋಗಿದ್ದಾರೆ. ಪ್ರಾಣಿಗಳು ತೋಟಕ್ಕೆ ಬಂದಾಕ್ಷಣ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ.

ಇದನ್ನೂ ಓದಿ: BJP: ಈಶ್ವರಪ್ಪಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ !!

ಮೂರು ತಿಂಗಳು ಎಲ್ಲರೂ ಕೋವಿಗಳನ್ನು ಪೊಲೀಸ್‌ ಠಾಣೆಯಲ್ಲಿ ಠೇವಣಿ ಇಡಬೇಕೆಂದು ಜಿಲ್ಲಾಡಳಿತವು ಚುನಾವಣೆ ಬಂದಿರುವುದರಿಂದ ಸೂಚನೆ ನೀಡಿದೆ. ಹಾಗಾಗಿ ಕೃಷಿಕರಿಗೆ ಕಾಡು ಪ್ರಾಣಿಳು ತೋಟಕ್ಕೆ ನುಗ್ಗಿ ಹಾನಿ ಮಾಡಿದಾಗ ಅವುಗಳನ್ನು ಓಡಿಸಲು ಕೋವಿ ಇಲ್ಲದೇ ಇರುವ ಕಾರಣ ಹಾಗೂ ಬೆಳೆ ಕಣ್ಣೆದುರೇ ನಾಶವಾಗುತ್ತಿದ್ದರೂ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ. ಹಾಗಾಗಿ ರೈತರಿಗೆ ವಿನಾಯಿತಿ ನೀಡಬೇಕೆನ್ನುವ ಮನವಿಗೆ ಇನ್ನೂ ಕೂಡಾ ಸ್ಪಂದನೆ ದೊರಕಿಲ್ಲ.

ಇದನ್ನೂ ಓದಿ: Pune: ಇನ್ಮುಂದೆ ಮಂಗಳಮುಖಿಯರು ಟ್ರಾಫಿಕ್ ನಲ್ಲಿ ಹಣ ಕೇಳುವಂತಿಲ್ಲ, ಯಾರ ಮನೆಗೂ ಹೋಗುವಂತಿಲ್ಲ !! ಹೊಸ ಆದೇಶ

ಕಾಡುಪ್ರಾಣಿಗಳಿಂದ ಬೆಳೆ, ಸ್ವರಕ್ಷಣೆಗೆಂದು ಕೋವಿಗಳನ್ನು ಪೊಲೀಸರು ಠೇವಣಿ ಇಟ್ಟಿದ್ದಾರೆ. ಹಾಗಾಗಿ ಪೊಲೀಸರೇ ನಮಗೆ ರಕ್ಷಣೆ ಒದಗಿಸಬೇಕು ಎಂದು ಕೃಷಿಕರ ವಾದವಾಗಿದೆ. ಹಾಗಾಗಿ ಪುತ್ತೂರು ಭಾಗದ ಕೃಷಿಕರು ಈ ಕುರಿತು ಇದೀಗ ಅಭಿಯಾನ ಮಾಡಿದ್ದು, ಹಲವಾರು ಕರೆಗಳು ಪೊಲೀಸರ ಸಹಾಯವಾಣಿಗೆ ಹೋಗಿದೆ.

ನಮ್ಮಲ್ಲಿ ಕೋವಿ ಇಲ್ಲ. ಕೋತಿ, ಹಂದಿ ಮತ್ತಿತರ ಕಾಡುಪ್ರಾಣಿಗಳ ಹಾವಳಿ ತೋಟದಲ್ಲಿ ಹೆಚ್ಚಾಗಿದೆ. ಹಾಗಾಗಿ ಪೊಲೀಸರೇ ಬಂದು ಬೆಳೆ ರಕ್ಷಣೆ ಮಾಡಲಿ ಎಂದು ಕೃಷಿಕರ ಆಗ್ರಹ. ಈ ಕುರಿತು ಇದೀಗ ಕರ್ನಾಟಕ ರಾಜ್ಯ ಹಸುರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕವು ತುರ್ತು ಸೇವೆ 112ಕ್ಕೆ ಕರೆ ಮಾಡುವ ಚಳುವಳಿಯನ್ನು ಪರವಾನಗಿ ಹೊಂದಿದ ಎಲ್ಲಾ ಕೃಷಿಕರು ಆರಂಭ ಮಾಡಬೇಕು ಎಂದು ಹೇಳಿದೆ.

Leave A Reply

Your email address will not be published.