Health Tips: ಪ್ರತಿನಿತ್ಯ 15,000 ಹೆಜ್ಜೆ ವಾಕಿಂಗ್ ಮಾಡುವುದರಿಂದ ನಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದೇ? : ಹೌದು ಎನ್ನುತ್ತವೆ ಸಂಶೋಧನೆಗಳು

Health Tips: “ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ”. ಬಹುಶಃ ಈ ವಾಕ್ಯವನ್ನು ಎಲ್ಲಾದರೂ ಕೇಳೆ ಇರುತ್ತೀರಿ. ಹೌದು ನಮ್ಮ ಆರೋಗ್ಯವನ್ನು ನಾವೇ ಅತ್ಯುತ್ತಮವಾಗಿ ಕಾಪಾಡಿಕೊಳ್ಳಬಹುದು. ಅದಕ್ಕಾಗಿ ದಿನನಿತ್ಯ ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು ಹಾಗೆಯೇ ಉತ್ತಮ ಆಹಾರ ಸೇವನೆ ತುಂಬಾ ಮುಖ್ಯ. ವಿಶೇಷವಾಗಿ ವಾಕಿಂಗ್ ಮಾಡುವುದು ನಮ್ಮ ಆರೋಗ್ಯ ಮಟ್ಟವನ್ನು ಹೆಚ್ಚಿಸುತ್ತದೆಯೇ ಎಂಬ ಪ್ರಶ್ನೆ ಅನೇಕರಲ್ಲಿರಬಹುದು ಆದರೆ ನಿಜವಾಗಿ ನಾವು ದಿನನಿತ್ಯ ವಾಕಿಂಗ್ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ.

ಇದನ್ನೂ ಓದಿ: Pune: ಇನ್ಮುಂದೆ ಮಂಗಳಮುಖಿಯರು ಟ್ರಾಫಿಕ್ ನಲ್ಲಿ ಹಣ ಕೇಳುವಂತಿಲ್ಲ, ಯಾರ ಮನೆಗೂ ಹೋಗುವಂತಿಲ್ಲ !! ಹೊಸ ಆದೇಶ

ವಾಕಿಂಗ್ ನಿಜವಾಗಿಯೂ ಆರೋಗ್ಯಕರವಾಗಿದ್ದು, ನಮ್ಮ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಹಲವಾರು ಪ್ರಯೋಜನಗಳನ್ನು ಹೊಂದಿರುತ್ತದೆ.

ಇದನ್ನೂ  ಓದಿ: Puttur: ತೋಟಕ್ಕೆ ಮಂಗ ಬಂದಿದೆ, ಬೇಗ ಬನ್ನಿ; ದ.ಕನ್ನಡ ಕೃಷಿಕರಿಂದ ಪೊಲೀಸರಿಗೆ ಕರೆ

ಇದು ಹೃದಯರಕ್ತನಾಳದಲ್ಲಿ ರಕ್ತದ ಹರಿವನ್ನು ನಿಯಂತ್ರಿಸುತ್ತದೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ‌ ಮತ್ತು ಸ್ನಾಯುಗಳು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ. ಇಷ್ಟು ಮಾತ್ರವಲ್ಲದೆ ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ನೆರವಾಗುತ್ತದೆ. ಪ್ರತಿದಿನ 15,000 ಹೆಜ್ಜೆಗಳನ್ನು ನಡೆಯುವುದು ಅನೇಕ ವ್ಯಕ್ತಿಗಳಿಗೆ ಪ್ರಯೋಜನಕಾರಿ ಗುರಿಯಾಗಿದೆ. ಪ್ರತಿದಿನ 15,000 ಹೆಜ್ಜೆಗಳ ನಡಿಗೆಯ ಅನೇಕ ಪ್ರಯೋಜನಗಳ ಬಗ್ಗೆ ನಾವೀಗ ತಿಳಿಯೋಣ.

ಪ್ರತಿದಿನ 15,000 ಹೆಜ್ಜೆಗಳನ್ನು ನಡೆಯುವುದರಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳು :

1. ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ : ನಿಯಮಿತ ನಡಿಗೆಯಿಂದ ಹೃದಯರಕ್ತನಾಳದ ಆರೋಗ್ಯವನ್ನು ಹಾಗೆಯೇ ಹೃದಯವನ್ನು ಬಲಪಡಿಸುತ್ತದೆ. ರಕ್ತದೊತ್ತಡವನ್ನು(BP) ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೆಯೇ ನಿತ್ಯ ವಾಕಿಂಗ್ ಮಾಡುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

2. ತೂಕ ನಿರ್ವಹಣೆ : ವಾಕಿಂಗ್ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ಸುಡುತ್ತದೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ಬೊಜ್ಜು-ಸಂಬಂಧಿತ ಕಾಯಿಲೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.

3. ದೀರ್ಘ ಉಸಿರಾಟ : ವಾಕಿಂಗ್ ಮಾಡುವುದರಿಂದ ನಮ್ಮ ಶ್ವಾಸಕೋಶದ ಸಾಮರ್ಥ್ಯ ಮತ್ತು ಕಾರ್ಯವನ್ನು ಸುಧಾರಿಸುತ್ತದೆ, ಉತ್ತಮ ಉಸಿರಾಟದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಿಂದ ದೀರ್ಘಾಯುಷ್ಯ ವೃದ್ಧಿಸಬಹುದು.

4. ಸ್ನಾಯು, ಮೂಳೆಗಳು ಬಲಗೊಳ್ಳುತ್ತವೆ : ವಾಕಿಂಗ್ ಒಂದು ರೀತಿಯ ವ್ಯಾಯಾಮವಾಗಿದ್ದು ಅದು ಮೂಳೆಯ ಸಾಂದ್ರತೆ ಮತ್ತು ಸ್ನಾಯುವಿನ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗೆಯೇ ಆಸ್ಟಿಯೊಪೊರೋಸಿಸ್‌ ಅಪಾಯವನ್ನು ಕಡಿಮೆ ಮಾಡುತ್ತದೆ.

5. ಉತ್ತಮ ಮಾನಸಿಕ ಆರೋಗ್ಯ : ದೈಹಿಕ ಚಟುವಟಿಕೆಯು ದೇಹದಲ್ಲಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಮಾತ್ತು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಹಾಗೆಯೇ ನಿಯಮಿತ ವಾಕಿಂಗ್ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

6. ನಿದ್ರೆಯ ಗುಣಮಟ್ಟ ಸುಧಾರಣೆ : ನಿಯಮಿತ ದೈಹಿಕ ಚಟುವಟಿಕೆಯು ಆರಾಮದಾಯಕ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಆಳವಾದ ಮತ್ತು ಹೆಚ್ಚು ಶಾಂತ ನಿದ್ರೆಯನ್ನು ಉತ್ತೇಜಿಸುತ್ತದೆ, ಇದು ಒಟ್ಟಾರೆ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ನಿರ್ಣಾಯಕವಾಗಿದೆ.

7. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ : ನಿಯಮಿತವಾಗಿ ನಡೆಯುವುದು ಟೈಪ್ 2 ಮಧುಮೇಹ ಹಾಗೂ ಕೆಲವು ಕ್ಯಾನ್ಸರ್‌ಗಳಿಗೆ, ಮೆಟಾಬಾಲಿಕ್ ಸಿಂಡ್ರೋಮ್ ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

8. ದೀರ್ಘಾಯುಷ್ಯ ಪ್ರಯೋಜನಗಳು : ವಾಕಿಂಗ್ ಸೇರಿದಂತೆ ನಿಯಮಿತ ದೈಹಿಕ ಚಟುವಟಿಕೆಯು ದೀರ್ಘಾವಧಿಯ ಜೀವಿತಾವಧಿಯೊಂದಿಗೆ ಸಂಬಂಧಿಸಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. ಪ್ರತಿದಿನ 15,000 ಹೆಜ್ಜೆಗಳನ್ನು ನಡೆಯುವುದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಮೂಲಕ ಮತ್ತು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ.

Leave A Reply

Your email address will not be published.