Bengaluru: ಗನ್ ಹಿಡಿದು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ಆಗಂತುಕ

Share the Article

 

Bengaluru: ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿ ಕೆಲ ಸಮಯ ಆತಂಕ ಮೂಡಿಸಿದ್ದಾನೆ. ಈ ಬೆನ್ನಲ್ಲೇ ಸಿಎಂ ಭದ್ರತೆಯಲ್ಲಿ ಭಾರೀ ಲೋಪ ಕಂಡುಬಂದಿದೆ ಎನ್ನಲಾಗಿದೆ.

ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಕಾಲಿಗೆ ಚಕ್ರಕಟ್ಟಿಕೊಂಡಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್(DK Shivkumar) ಓಡಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು(bengaluru) ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ರೋಡ್​ ಶೋ ನಡೆಯುತ್ತಿದ್ದ ವೇಳೆ ಏಕಾಏನಿ ಗನ್​ ಇಟ್ಟುಕೊಂಡಿದ್ದ ವ್ಯಕ್ತಿ ವಾಹನ ಏರಿ ಸಿದ್ದರಾಮಯ್ಯಗೆ(CM Siddaramaiah)ಹಾರ ಹಾಕಿದ್ದಾನೆ. ಇದು ಆತಂಕಕ್ಕೆ ಕಾರಣವಾಗಿದೆ.

ಅಂದಹಾಗೆ ಗನ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ಮತ್ತು ಅಭ್ಯರ್ಥಿ ಸೌಮ್ಯರೆಡ್ಡಿ ನಿಂತಿದ್ದ ಕ್ಯಾಂಟೆರ್ ಮೇಲೆ ಹತ್ತಿ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿದ್ದಾರೆ. ಈ ವೇಳೆ ಆತನ ಸೊಂಟದಲ್ಲಿ ಗನ್ ಇರುವುದು ಪತ್ತೆಯಾಗಿದೆ. ಆದರೆ ಮುಖ್ಯಮಂತ್ರಿಗಳಿಗೆ Z ಭದ್ರತೆ ಇರುವುದರಿಂದ ಗನ್ ಇಟ್ಟುಕೊಂಡಿರುವ ಯಾರೇ ಆಗಲಿ ಸಿಎಂ ಬಳಿ ಹೋಗುವಂತಿಲ್ಲ. ಹೀಗಾಗಿ ಇಲ್ಲಿ ದೊಡ್ಡ ಭದ್ರತಾ ಲೋಪ ಕಂಡುಬಂದಿದೆ.

ಸದ್ಯ ಆಗಂತುಕ ಯಾರೆಂಬುದು ಪತ್ತೆಯಾಗಿದೆ. ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿ ರಿಯಾಜ್ ಎಂಬುವವನು ಎನ್ನಲಾಗಿದೆ. ಜೀವಭಯ ಇದ್ದ ಕಾರಣ ರಿಯಾಜ್ ಅರ್ಜಿ ನೀಡಿ ಗನ್ ಪಡೆದುಕೊಂಡಿದ್ದನು. ಆದರೆ ಚುನಾವಣೆ ಸಮಯದಲ್ಲಿ ಗನ್ ಪೊಲೀಸ್ ಠಾಣೆಯ ವಶಕ್ಕೆ ನೀಡಬೇಕಿತ್ತು. ಇನ್ನು ಗನ್ ಸರೆಂಡರ್ ಮಾಡದಿರಲು ರಿಯಾಜ್ ಅನುಮತಿ ಪಡೆದಿದ್ದ ಎಂದು ತಿಳಿದುಬಂದಿದೆ.

ಇನ್ನು Z ಭದ್ರತೆ ಹೊಂದಿರುವ ಸಿಎಂ ಹತ್ತಿರ ಗನ್ ಇರುವ ವ್ಯಕ್ತಿ ಹೋಗುವಂತಿಲ್ಲ. ಇನ್ನು ಸಿಎಂಗೆ ಝಡ್ ಸೆಕ್ಯುರಿಟಿ ಭದ್ರತೆ ಇರುತ್ತೆ. ಹೀಗಾಗಿ ಸಿಎಂ ಬಳಿ ಬರುವವರನ್ನ ತಪಾಸಣೆ ನಡೆಸಿ ಹತ್ತಿರ ಬಿಡಬೇಕಿತ್ತು. ಆದ್ರೆ, ಅದನ್ನು ಪೊಲೀಸರು ಮಾಡಿಲ್ಲ. ಇದೀಗ ರಿಯಾಜ್ ಸಾರ್ವಜನಿಕವಾಗಿ ಗನ್ ಪ್ರದರ್ಶನ ಮಾಡಿದ ಆರೋಪದ ಮೇಲೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಗಳಿವೆ.

Leave A Reply

Your email address will not be published.