Telangana: 30 ಮಂಗಗಳ ಶವ ಇದ್ದ ಟ್ಯಾಂಕ್‌ನಿಂದ ಜನರಿಗೆ ನೀರು ಪೂರೈಕೆ

Telangana: ತೆಲಂಗಾಣದ ನಲ್ಗೊಂಡದ ನೀರಿನ ತೊಟ್ಟಿಯಲ್ಲಿ 30 ಸತ್ತ ಕೋತಿಗಳು ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಯಾವುದೇ ಪರಿಶೀಲನೆ ಮಾಡದೆ ಅದೇ ಕುಡಿಯುವ ನೀರನ್ನು ಜನರಿಗೆ ಮಾಡಲಾಗುತ್ತಿದ್ದು, ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಜನರಿಗೆ ಇದೀಗ ಸಂಕಷ್ಟ ಶುರುವಾಗಿದೆ. ನೀರಿನ ತೊಟ್ಟಿಯನ್ನು ತೆರೆದಿರುವುದರಿಂದ ಈ ಮಂಗಗಳು ಬಿದ್ದಿದೆ ಎನ್ನಲಾಗಿದೆ.

ಇದನ್ನೂ ಓದಿ: Abortion: ಗಡಿಬಿಡಿಯಲ್ಲಿ ಬೇರೆ ಗರ್ಭಿಣಿಗೆ ಅಬಾರ್ಷನ್ ಮಾಡಿದ ವೈದ್ಯರು !!

ಭಾರತ ರಾಷ್ಟ್ರಸಮಿತಿ (ಬಿಆರ್‌ಎಸ್‌) ಮುಖಂಡ ಮತ್ತು ತೆಲಂಗಾಣ ಮಾಜಿ ಸಚಿವ ಕೆ.ಟಿ.ರಾಮರಾವ್‌ ಅವರು ನಲ್ಗೊಂಡದ ತೆಲಂಗಾಣ ಸರಕಾರವನ್ನು ಈ ಕಾರಣಕ್ಕೆ ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Price Hike: ಬಿಸಿಲ ತಾಪ ಏರಿಕೆ – ತರಕಾರಿ, ಮಾಸಂಸ ಬೆಲೆ ಗಗನಕ್ಕೆ !!

ಕಾಂಗ್ರೆಸ್‌ ಸರಕಾರ ಸಾರ್ವಜನಿಕ ಆರೋಗ್ಯದ ಬದಲಿಗೆ ರಾಜಕೀಯಕ್ಕೆ ಆದ್ಯತೆ ನೀಡುವುದು ಇದರಿಂದ ತಿಳಿಯುತ್ತದೆ. ತೆಲಂಗಾಣ ಮುನ್ಸಿಪಲ್‌ ಇಲಾಖೆಯಲ್ಲಿ ಎಂತಹ ನಾಚಿಕೆಗೇಡಿನ ಸ್ಥಿತಿ ಇದೆ ಎಂದರೆ ಅನುಸರಿಸಬೇಕಾದ ಮಾರ್ಗಸೂಚಿ ಪಾಲಿಸುತ್ತಿಲ್ಲ, ಇದು ನಿತ್ಯ ನಿರ್ವಹಣೆ ಇಲ್ಲ. ನೀರಿನ ಟ್ಯಾಂಕ್‌ ಶುಚಿಗೊಳಿಸುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.

Leave A Reply

Your email address will not be published.