KSRTC: ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಿಗಲಿದೆ ಇನ್ನು 9 ಗಂಟೆ ವಿಶ್ರಾಂತಿ

KSRTC: ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೆ ಚಾಲಕರ ಮೇಲೆ ಇರುವ ಕೆಲಸದ ಒತ್ತಡವೂ ಒಂದು ಕಾರಣ ಎಂದು ಮನಗಂಡಿರುವ ನಿಗಮದ ಆಡಳಿತ ಮಂಡಳಿ, ಅದಕ್ಕಾಗಿ ಇದೀಗ ಚಾಲಕರನ್ನು ರಾತ್ರಿ ಸೇವೆ ದೂರದ ಮಾರ್ಗಗಳಿಗೆ ಕರ್ತವ್ಯಕ್ಕೆ ಕಳುಹಿಸುವುದಕ್ಕೂ ಮುಂಚೆ ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Abortion: ಗಡಿಬಿಡಿಯಲ್ಲಿ ಬೇರೆ ಗರ್ಭಿಣಿಗೆ ಅಬಾರ್ಷನ್ ಮಾಡಿದ ವೈದ್ಯರು !!

ಚಾಲಕರ ಮೇಲೆ ಉಂಟಾಗುತ್ತಿರುವ ಕೆಲಸದ ಒತ್ತಡದ ಕುರಿತು ಚರ್ಚೆಯಾಗುತ್ತಿದ್ದು, ಹಾಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಅಪಘಾತ ಪ್ರಕರಣದ ಕುರಿತು ವಿಶ್ಲೇಷಣಾ ಸಭೆ ನಡೆದಿದೆ.

ಇದನ್ನೂ ಓದಿ: D.K.Bappanadu Kshetra: ಬಪ್ಪನಾಡು ಕ್ಷೇತ್ರದಲ್ಲಿ ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನ ಜಖಂಗೊಳಿಸಿದ ಭಕ್ತರು

ವಿಶ್ರಾಂತಿ ಇಲ್ಲದೆ ಮೇಲಿಂದ ಮೇಲೆ ಕರ್ತವ್ಯಕ್ಕೆ ನಿಯೋಜನೆ ಮಾಡುವುದರಿಂದ ಚಾಲಕರಿಗೆ ಸುಸ್ತಾಗುವುದರಿಂದ ಅಪಘಾತಕ್ಕೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. ಈ ಕಾರಣದಿಂದ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961ರಲ್ಲಿ ಇರುವಂತೆ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಲು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

1 Comment
  1. […] ಇದನ್ನೂ ಓದಿ: KSRTC: ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಿಗಲಿದೆ ಇ… […]

Leave A Reply

Your email address will not be published.