Insomnia: ನಿದ್ರಾಹೀನತೆಗೆ ಒತ್ತಡ ಮಾತ್ರವಲ್ಲ ಸಾಮಾಜಿಕ ಜಾಲತಾಣ, ಒಟಿಟಿಗಳೂ ಕಾರಣ : ಸಂಶೋಧನಾ ವರದಿಯಲ್ಲಿ ಬಹಿರಂಗ

Insomnia: ಇತ್ತೀಚಿನ ದಿನಮಾನದಲ್ಲಿ ಯುವ ಜನಾಂಗಕ್ಕೆ ಕಾಡುತ್ತಿರುವ ಅತಿ ದೊಡ್ಡ ಕಾಯಿಲೆ ಎಂದರೆ ಅದು ನಿದ್ರಾಹೀನತೆ. ಅದು ಎಷ್ಟರ ಮಟ್ಟಿಗೆಂದರೆ ಸ್ವತಃ ತಾಯಿಯೇ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲದಂತಾಗಿದೆ.

ಇತ್ತೀಚೆಗೆ ಭಾರತದಲ್ಲಿನ ಸರಿಸುಮಾರು ಶೇ.58 ರಷ್ಟು ಜನರು ರಾತ್ರಿ ಹನ್ನೆರಡು ಗಂಟೆಯ ನಂತರ ಮಲಗುತ್ತಿದ್ದಾರೆ. ಈ ರೀತಿ ತಡವಾಗಿ ಮಲಗುವುದರಿಂದ ಬೆಳಗ್ಗೆ ಲೇಟಾಗಿ ಏಳುವುದು, ಎದ್ದಾಗ ನಿಶಕ್ತಿಯ ಭಾವನೆ ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಇತ್ತೀಚೆಗೆ ವಿಶ್ವ ನಿದ್ರಾ ದಿನದ ಹಿನ್ನೆಯಲ್ಲಿ ಗ್ರೇಟ್ ಇಂಡಿಯನ್ ಸ್ಟೀಪ್ ಸ್ಕೋರ್‌ಕಾರ್ಡ್, ವರದಿಯೊಂದನ್ನು ಬಿಡುಗಡೆ ಮಾಡಿದ್ದು ಈ ವರದಿಯಲ್ಲಿ ನಿದ್ರಾಹೀನತೆಗೆ ಮುಖ್ಯ ಕಾರಣ ಅತಿಯಾದ ಡಿಜಿಟಲ್ ಸಾಮಗ್ರಿಗಳ ಬಳಕೆ ಹಾಗೂ ಅತಿಯಾದ ಒತ್ತಡ ಕಾರಣ ಎಂದು ತಿಳಿಸಿದೆ.

ಈ ಸಮೀಕ್ಷೆಯಲ್ಲಿ ಒಟ್ಟಾರೆ 10,000 ಜನರನ್ನು ಬಳಸಿಕೊಳ್ಳಲಾಗಿದೆ. ಒಟಿಟಿ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಶೇ.54ರಷ್ಟು ಜನರು ಸರಿಯಾದ ಸಮಯದಲ್ಲಿ ಮಲಗದೆ ಇರುವುದು ಹಾಗೂ ಶೇ.88ರಷ್ಟು ಜನರು ಮಲಗುವುದಕ್ಕೂ ಮುನ್ನ ಮೊಬೈಲ್ ಬಳಕೆ ಮಾಡುವುದು ಸಂಶೋಧನೆಯಲ್ಲಿ ಪತ್ತೆಯಾಗಿದೆ.

ಇನ್ನೂ ಶೇ.30ರಷ್ಟು ಮಂದಿ ಭವಿಷ್ಯದ ಚಿಂತೆಯಿಂದಾಗಿ ರಾತ್ರಿ ವೇಳೆಯಲ್ಲಿ ನಿದ್ರೆ ಬರುತ್ತಿಲ್ಲ ಎಂದು ಹೇಳಿದ್ದರೆ, ಉತ್ತಮ ಹಾಸಿಗೆ ಇದ್ದರೆ ಉತ್ತಮವಾಗಿ ನಿದ್ರೆ ಮಾಡಬಹುದು ಎಂದು ಶೇ.31ರಷ್ಟು ಜನರು ಹೇಳಿದ್ದಾರೆ. ಇನ್ನು ಡಿಜಿಟಲ್ ಡಿವೈಸ್ಗಳನ್ನು ಬಳಕೆ ಮಾಡದಿದ್ದರೆ ಉತ್ತಮ ರೀತಿಯಲ್ಲಿ ನಿದ್ರೆ ಮಾಡಬಹುದು ಎಂದು ಶೇ.38ರಷ್ಟು ಜನ ತಿಳಿಸಿದ್ದಾರೆ.

ಈ ವರದಿಯಲ್ಲಿ ಬೆಂಗಳೂರು ಹೈದರಾಬಾದ್ ಚೆನ್ನೈ ನಗರಗಳಲ್ಲಿ ವಾಸಿಸುವ ಶೇ.43 ರಷ್ಟು ಜನ ತಡವಾಗಿ ಏಳುವುದಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣವೆಂದು ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: Death Prediction: ಈ ಡೆತ್ ಕ್ಯಾಲ್ಕುಲೇಟರ್ ನಿಮ್ಮ ಸಾಯುವ ದಿನಾಂಕ ಮತ್ತು ಸಮಯವನ್ನು ಹೇಳುತ್ತೆ

Leave A Reply

Your email address will not be published.