Mangaluru News: ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತ ದೇಹ ನೇತ್ರಾವತಿ ನದಿಯಲ್ಲಿ ಪತ್ತೆ

Mangaluru News: ನೇತ್ರಾವತಿ ನದಿಯಲ್ಲಿ ತಾಯಿ ಮತ್ತು ಒಂದು ವರ್ಷದ ಮಗುವಿನ ಮೃತದೇಹವೊಂದು ಪತ್ತೆಯಾಗಿದೆ. ತಾಯಿ ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿರುಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Cyber Crime: ಪುತ್ತೂರು; ಅಪರಿಚಿತ ವ್ಯಕ್ತಿಯ ಬೆದರಿಕೆ ಕರೆ; ಪುತ್ತೂರಿನ ವೈದ್ಯರು ಕಳೆದುಕೊಂಡಿದ್ದು 16 ಲಕ್ಷಕ್ಕಿಂತಲೂ ಹೆಚ್ಚಿನ ಹಣ

ಮೃತದೇಹವು ಶುಕ್ರವಾರ ರಾತ್ರಿ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ನಾಗರಾಜ್‌ ಅವರ ಪತ್ನಿ ಚೈತ್ರಾ (30) ಎಂಬಾಕೆಯೇ ಮೃತ ಮಹಿಳೆ. ಅಡ್ಯಾರ್‌ ನಿವಾಸಿಯಾಗಿದ್ದು, ಇವರು ತನ್ನ ಒಂದು ವರ್ಷದ ಮಗ ದಿಯಾಂಶ್‌ ಜೊತೆ ಮಧ್ಯಾಹ್ನದ ಸಮಯದಲ್ಲಿ ಸೇತುವೆಯ ಮೂಲಕ ನಡೆದುಕೊಂಡು ಬಂದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: Lok Sabha Election: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮುನ್ನಾ 20.85 ಕೋಟಿ ರೂಪಾಯಿ ನಗದು, 27 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ

ಕೆಲವು ಸ್ಥಳೀಯರು ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಗಮನಿಸಿದ್ದರು. ಆದರೆ ಮಧ್ಯಾಹ್ನದ ಬಳಿಕ ಆಕೆಯ ಮನೆಯವರು ಇವರನ್ನು ಹುಡುಕಾಟ ಮಾಡಲು ಪ್ರಾರಂಭಿಸಿದ್ದು, ಆವಾಗಲೇ ಇವರು ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಇದು ಆತ್ಮಹತ್ಯೆಯೇ ಎಂಬುವುದು ಇನ್ನೂ ಕೂಡಾ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

1 Comment
  1. […] ಇದನ್ನೂ ಓದಿ: Kadaba News: ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತ ದ… […]

Leave A Reply

Your email address will not be published.