Cyber Crime: ಪುತ್ತೂರು; ಅಪರಿಚಿತ ವ್ಯಕ್ತಿಯ ಬೆದರಿಕೆ ಕರೆ; ಪುತ್ತೂರಿನ ವೈದ್ಯರು ಕಳೆದುಕೊಂಡಿದ್ದು 16 ಲಕ್ಷಕ್ಕಿಂತಲೂ ಹೆಚ್ಚಿನ ಹಣ

Cyber Crime: ಅಪರಿಚಿತ ವ್ಯಕ್ತಿಯೋರ್ವ ದೆಹಲಿ ಪೊಲೀಸರ ಹೆಸರಿನಲ್ಲಿ ಬೆದರಿಸಿ ಪುತ್ತೂರಿನ ಖ್ಯಾತ ವೈದ್ಯರೊಬ್ಬರಿಗೆ ಲಕ್ಷಾಂತರ ಹಣ ಪೀಕಿಸಿದ ಕುರಿತು ಇದೀಗ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Lok Sabha Election: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮುನ್ನಾ 20.85 ಕೋಟಿ ರೂಪಾಯಿ ನಗದು, 27 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ

ಇದೊಂದು ರೀತಿಯ ಸೈಬರ್‌ ವಂಚಕರ ಜಾಲ ಎಂದು ತಿಳಿದು ಬಂದಿದೆ. ವಿದ್ಯಾವಂತರು, ಪ್ರತಿಷ್ಠರನ್ನೇ ಈ ಮೋಸಗಾರರು ತಮ್ಮ ಗುರಿಯಾಗಿಸಿ ಹಣ ದೋಚುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Indian Navy: ಖಡಗಳ್ಳರ ದಾಳಿಯಿಂದ 23 ಜನ ಪಾಕಿ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಬೊಳುವಾರು ನಿವಾಸಿ ಡಾ.ಚಿದಂಬರ ಅಡಿಗ (69) ಎಂಬ ವೈದ್ಯರೇ ಈ ವಂಚನೆ ಜಾಲಕ್ಕೆ ಸಿಲುಕಿದವರು. ಇವರು ಕಳೆದುಕೊಂಡಿದ್ದು ಅಷ್ಟಿಷ್ಟಲ್ಲ. ಬರೋಬ್ಬರಿ 16 ಲಕ್ಷ ಹಣ. ಸೈಬರ್‌ ವಂಚಕರ ದುಷ್ಕೃತ್ಯಕ್ಕೆ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ ಪ್ರಖ್ಯಾತ ವೈದ್ಯ.

” ನಾನು ನಿಮ್ಮ ಮೇಲೆ ಮಾದಕ ವಸ್ತುವಿಗೆ ಸಂಬಂಧಿಸಿದಂತೆ, ಅಕ್ರಮ ಹಣ ಹೊಂದಿರುವ ಕುರಿತು, ಮಾನವ ಕಳ್ಳ ಸಾಗಾಣಿಕೆ ಕುರಿತು ಪ್ರಕರಣ ದಾಖಲಾಗಿದೆ. ಅರೆಸ್ಟ್‌ ಮಾಡಲು ವಾರೆಂಟ್‌ ಬಂದಿದೆ” ಎಂದು ದೆಹಲಿಯ ಪೊಲೀಸರ ಸೋಗಿನಲ್ಲಿ ಬೆದರಿಕೆ ಹಾಕಿದ್ದಾನೆ. ಅಷ್ಟು ಮಾತ್ರವಲ್ಲದೇ ನೀವು ದೆಹಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು. ಇಲ್ಲಿಗೆ ನೀವು ಬರಲು ಆಗದಿದ್ದರೆ ಆನ್ಲೈನ್‌ ಮೂಲಕ ಕೋರ್ಟ್‌ನಲ್ಲಿ ಕೇಸ್‌ ನಡೆಸುತ್ತೇವೆ, ನಿಮ್ಮ ಬ್ಯಾಂಕ್‌ನಲ್ಲಿರುವ ಹಣ ನಾವು ಹೇಳು ಅಕೌಂಟ್‌ಗೆ ವರ್ಗಾವಣೆ ಮಾಡಬೇಕು. ಕೋರ್ಟ್‌ ಕೇಸು ಮುಗಿದ ನಂತರ ನಿಮ್ಮ ಹಣ ನಿಮಗೆ ವಾಪಾಸು ದೊರಕುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.

ಒಂದು ವೇಳೆ ನೀವು ಹಣ ನೀಡಲು ನಿರಾಕರಿಸಿದರೆ ನಿಮ್ಮ ಮನೆಗೆ ಬಂದು ಅರೆಸ್ಟ್‌ ಮಾಡಲಾಗುವುದು ಎಂದು ಹೆದರಿಸಿದ್ದಾರೆ. ಹಾಗೆನೇ ಕೆಲವೊಂದು ದಾಖಲೆಗಳನ್ನು ವಾಟ್ಸಪ್‌ಗೆ ಕಳುಹಿಸಿದ್ದಾನೆ. ಆತನ ಮಾತನ್ನು ನಂಬಿ ವೈದ್ಯರು ತಮ್ಮ ಖಾತೆಯಿಂದ 16,50,000 ಹಣ ವರ್ಗಾವಣೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡಿದ್ದು, ಗೆಳೆಯರಲ್ಲಿ ಈ ವಿಷಯ ತಿಳಿಸಿದಾಗ ಆನ್‌ಲೈನ್‌ ಮೋಸದ ಕುರಿತು ತಿಳಿದು ಬಂದಿದೆ. ಈ ಕುರಿತು ಅವರು ದೂರಿನಲ್ಲಿ ಹೇಳಿದ್ದಾರೆ.

Leave A Reply

Your email address will not be published.