B Y Vijayendra : ಟಿಕೆಟ್ ಮಿಸ್ ಆದ ಪ್ರತಾಪ್ ಸಿಂಹಗೆ ಗುಡ್ ನ್ಯೂಸ್ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

B Y Vijayendra : ಕೊಡಗು-ಮೈಸೂರು ಕ್ಷೇತ್ರದಿಂದ 2 ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪ್ರತಾಪ್ ಸಿಂಹ(Pratap Simha) ಅವರ ಈ ಸಲದ ಟಿಕೆಟ್ ಯದುವೀರ್ ಅವರ ಪಾಲಾಗಿದೆ. ಆದರೆ ಯುವ ನೇತಾರ, ನಾಯಕನಿಗೆ ಬಿಜೆಪಿ ಯಾಕೆ ಹೀಗೆ ಮಾಡಿತು ಎಂದು ಎಲ್ಲರೂ ಬೇಸರ ಪಟ್ಟುಕೊಂಡಿದ್ದರು. ಆದರೀಗ ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(BY Vijayendra)ಅವರು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: Kadaba News: ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತ ದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಹೌದು, ಟಿಕೆಟ್ ಮಿಸ್ ಆದರೂ ಬೇಸರ, ಆಕ್ರೋಶವನ್ನು ಹೊರ ಹಾಕದೆ ಮೋದಿಯವರೇ ನನಗೆ ಎರಡು ಅವಧಿಗೆ ಎಂಪಿ ಮಾಡಿದ್ದಾರೆ, ಪತ್ರಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಸಾಯೋವರೆಗೂ ಮೋದಿ ಮೋದಿ ಎನ್ನುತ್ತಲೇ ಬದುಕುತ್ತೇನೆ. ಯಾರು ಏನೇ ಕೊಡುತ್ತೀನಿ ಎಂದರೂ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲಾ ಎಂದು ಸ್ವಾಮಿ ನಿಷ್ಠೆ ತೋರಿದ ಪ್ರತಾಪ್ ಸಿಂಹ ಅವರಿಗೆ ಅದೃಷ್ಟ ಹುಡುಕೊಂಡು ಬರುವ ಎಲ್ಲಾ ಸೂಚನೆಯನ್ನು ಬಿ ವೈ ವಿಜಯೇಂದ್ರ ನೀಡಿದ್ದಾರೆ.

ಇದನ್ನೂ ಓದಿ: Cyber Crime: ಪುತ್ತೂರು; ಅಪರಿಚಿತ ವ್ಯಕ್ತಿಯ ಬೆದರಿಕೆ ಕರೆ; ಪುತ್ತೂರಿನ ವೈದ್ಯರು ಕಳೆದುಕೊಂಡಿದ್ದು 16 ಲಕ್ಷಕ್ಕಿಂತಲೂ ಹೆಚ್ಚಿನ ಹಣ

ನಿನ್ನೆ ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್(BJP-JDS) ಸಮನ್ವಯ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರತಾಪ್ ಸಿಂಹ ಅವರಿಗೆ ಮುಂದೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಭವಿಷ್ಯವಿದೆ. ಪ್ರಧಾನಿ ಮೋದಿ ಏನೇ ನಿರ್ಧಾರ ಮಾಡಿದರೂ ಯೋಚಿಸಿ ಮಾಡುತ್ತಾರೆ. ಅವರು ಪ್ರತಾಪ್ ಸಿಂಹ ಅವರ ಬಗ್ಗೆಯೂ ಯೋಚಿಸುತ್ತಾರೆ, ಯದುವೀರ್ ಬಗ್ಗೆಯೂ ಯೋಚಿಸುತ್ತಾರೆ. ರಾಷ್ಟ್ರ ವರಿಷ್ಠರು ಏನೇ ಮಾಡಿದರೂ ಅದರ ಹಿಂದೆ ಒಂದು ಕಾರಣ ಇದ್ದೇ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ ಅವರನ್ನು ರಾಜ್ಯ ರಾಜಕೀಯಕ್ಕೆ ಕರೆತರುತ್ತೇವೆ ಎಂದು ವಿಜಯೇಂದ್ರ ಪರೋಕ್ಷವಾಗಿ ಹೇಳಿದ್ದಾರೆ.

1 Comment
  1. […] ಇದನ್ನೂ ಓದಿ: B Y Vijayendra : ಟಿಕೆಟ್ ಮಿಸ್ ಆದ ಪ್ರತಾಪ್ ಸಿಂಹಗೆ ಗ… […]

Leave A Reply

Your email address will not be published.