Dead body Found in Water Tank: ಟ್ಯಾಂಕರ್ ನಲ್ಲಿದ್ದ ಕೊಳೆತ ಮೃತದೇಹ : ಮೂರು ದಿನಗಳ ಕಾಲ ಅದೇ ನೀರು ಕುಡಿದ ಜನರು ಆತಂಕ

Dead body Found in Water Tank: ಮೂರು ದಿನಗಳಿಂದ ಟ್ಯಾಂಕರ್ ನಲ್ಲಿ ಕೊಳೆತ ಮೃತದೇಹದ ನೀರು ಸೇವಿಸಿ ಗ್ರಾಮಸ್ಥರು ಆತಂಕಗೊಂಡಿರುವ ಘಟನೆ ಬೀದ‌ರ್ ತಾಲೂಕಿನ ಆಣದೂರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: B Y Vijayendra : ಟಿಕೆಟ್ ಮಿಸ್ ಆದ ಪ್ರತಾಪ್ ಸಿಂಹಗೆ ಗುಡ್ ನ್ಯೂಸ್ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಗ್ರಾಮದ ನಿವಾಸಿ ರಾಜು ಶೈಲೇಶ್ (27) ವಿವಾಹ ಕಲಹದ ಹಿನ್ನೆಲೆಯಲ್ಲಿ ಮಾರ್ಚ್ 27 ರಂದು ಟ್ಯಾಂಕ್‌ಗೆ ಹಾರಿ ಪ್ರಾಣ ಬಿಟ್ಟಿದ್ದ.

ಗ್ರಾಮಸ್ಥರು ತಮ್ಮ ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದ್ದು, ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಪಂಚಾಯಿತಿ ಅಧಿಕಾರಿಗಳು ಟ್ಯಾಂಕ್ ಪರಿಶೀಲಿಸಿದಾಗ ಶೈಲೇಶ್ ಶವ ಪತ್ತೆಯಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಶವವನ್ನು ಟ್ಯಾಂಕ್‌ನಿಂದ ಹೊರತೆಗೆಯಲಾಗಿದೆ.

ಇದನ್ನೂ ಓದಿ: Kadaba News: ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತ ದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆತನ ಪತ್ನಿ ಕಳೆದ ಆರು ತಿಂಗಳಿಂದ ತಾಯಿ ಮನೆಯಲ್ಲಿದ್ದು, ಇದರಿಂದ ಮನನೊಂದ ರಾಜು ಟ್ಯಾಂಕ್‌ಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎಂದು ಆತನ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮಸ್ಥರು ಕಲುಷಿತ ನೀರು ಸೇವಿಸಿದ್ದರಿಂದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರ ಏರ್ಪಡಿಸಿದೆ.

ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಲು ಗ್ರಾಮಸ್ಥರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ಸೂಚಿಸಿದ್ದಾರೆ.

1 Comment
  1. […] ಇದನ್ನೂ ಓದಿ: Dead body Found in Water Tank: ಟ್ಯಾಂಕರ್ ನಲ್ಲಿದ್ದ ಕೊಳೆತ ಮ… […]

Leave A Reply

Your email address will not be published.