Uttar Pradesh: ಮದರಸಾ ಕಾಯ್ದೆ ಅಸಾಂವಿಧಾನಿಕ : ಹೈಕೋರ್ಟ್
ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯವು ಮದರಸ ಕಾಯ್ದೆಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪೊಂದನ್ನು ಹೊರಡಿಸಿದೆ. ಉತ್ತರ ಪ್ರದೇಶ ಮದರಸಾ ಶಿಕ್ಷಣ ಕಾಯ್ದೆ-2004ನ್ನು ಅಸಾಂವಿಧಾನಿಕ ಎಂದು ಹೇಳಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತೀರ್ಪಿನ ಹಿನ್ನೆಲೆ ಎಲ್ಲಾ ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮದರಸಾಗಳಲ್ಲಿ ಇಸ್ಲಾಮಿಕ್ ಶಿಕ್ಷಣದ ಜತೆಗೆ ಸಾಮಾನ್ಯ ಶಾಲೆಗಳಲ್ಲೂ ದಾಖಲು ಮಾಡಲು ಸೂಕ್ತ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದೆ.
ಮದರಸ ಕಾಯ್ದೆಯ ಕುರಿತು ತೀರ್ಪು ನೀಡಿದ ನ್ಯಾ ವಿವೇಕ್ ಚೌಧರಿ ನೇತೃತ್ವದ ದ್ವಿಸದಸ್ಯ ಪೀಠ, ‘ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಮುಸಲ್ಮಾನರಿಗೆ ವಿದ್ಯಾರ್ಥಿಗಳಿಗೆ ಅವರವರ ಧರ್ಮದ ಶಿಕ್ಷಣ ನೀಡಲಾಗುತ್ತದೆ. ಆದರೆ ಅವರಿಗೆ ಸ್ಪರ್ಧಾತ್ಮಕ ಶಿಕ್ಷಣವನ್ನೂ ಇದರ ಜತೆಗೆ ನೀಡುವುದನ್ನು ನಿರ್ಬಂಧಿಸಿರುವುದು ತಪ್ಪಾಗುತ್ತದೆ, ಇದು ಸಮಾನತೆಯ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದೆ.
ಇದರ ಅನ್ವಯ ನ್ಯಾಯಾಧೀಶರು ಕಾಯ್ದೆಯು ಅಮಾನ್ಯ’ ಎಂದು ತೀರ್ಪು ನೀಡಿ ಆದೇಶಿಸಿದರು. ಒಟ್ಟಾರೆ ಈ ತೀರ್ಪು ರಾಜ್ಯದ ಸುಮಾರು 25 ಸಾವಿರ ಮದರಸಾಗಳಿಗೆ ಅನ್ವಯವಾಗಲಿದೆ.