Bappanadu Temple: ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ಮತ್ತೆ ಧರ್ಮ ದಂಗಲ್‌ ; ಅನ್ಯಮತೀಯರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಬೇಡ ಎಂಬ ಆಗ್ರಹ

Mangaluru: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಿ ದೇವಸ್ಥಾನವಾದ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ(Bappanadu Durga Parameshwari Temple) ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಮಾತೊಂದು ಕೇಳಿ ಬಂದಿದೆ.

ಇದನ್ನೂ ಓದಿ: Maldives President Muizu: ಭಾರತವನ್ನು “ಅತ್ಯಂತ ಹತ್ತಿರದ ಮಿತ್ರ” ಎಂದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು : ಚೀನಾ ಪರ ಒಲವಿದ್ದ ಮುಯಿಜು ಭಾರತದ ಪರ ಬದಲಾಗಿದ್ದು ಹೇಗೆ ?

ಹಿಂದೂ ಜಾತ್ರಾ ವ್ಯಾಪರಸ್ಥರ ಸಂಘದ ಜಯರಾಮ್‌ ಶೆಟ್ಟಿಗಾರ್‌ ಅವರು ದೇವಸ್ಥಾನದ 150 ಮೀ. ವ್ಯಾಪ್ತಿಯೊಳಗೆ ಅನ್ಯಮತೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಹಾಗೂ ದೇವಸ್ಥಾನದ ವಠಾರದಲ್ಲಿ ಹಿಂದೂಗಳೇ ವ್ಯಾಪಾರ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ಟಿವ9 ವರದಿ ಮಾಡಿದೆ.

ಇದನ್ನೂ ಓದಿ: Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ; ಆರು ಮಂದಿ ವಶಕ್ಕೆ

ಕಳೆದ ವರ್ಷ ಈ ಕ್ಷೇತ್ರದಲ್ಲಿ ವ್ಯಾಪಾರದ ವಿಷಯದಲ್ಲಿ ಧರ್ಮ ದಂಗಲ್‌ ಸದ್ದು ಮಾಡಿತ್ತು. ಈ ಕ್ಷೇತ್ರದಲ್ಲಿ ಎಲ್ಲಾ ಜನರು ಜಾತ್ರೆ ಸಂದರ್ಭದಲ್ಲಿ ಮತ, ಧರ್ಮ ಮೀರಿ ಭಾಗವಹಿಸುತ್ತಾರೆ. ಆದರೆ ಕಳೆದ 2,3 ವರ್ಷಗಳಿಂದ ಇಲ್ಲಿ ಧರ್ಮ ದಂಗಲ್‌ ನಡೆಯುತ್ತಿದ್ದು, ಜಾತ್ರೆ ನಡೆಯುವ ಸಂದರ್ಭದಲ್ಲಿ ಇದು ಮತ್ತೆ ಎದ್ದು ಬಂದಿದೆ.

Leave A Reply

Your email address will not be published.