Russia: ರಷ್ಯಾದಲ್ಲಿ ಉಗ್ರ ದಾಳಿ : ಕಾನ್ಸರ್ಟ್ ಹಾಲ್ ನಲ್ಲಿ 60 ಮಂದಿ ಸಾವು 145 ಮಂದಿ ಗಂಭೀರ ಗಾಯ : ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಗ್ರೂಪ್ (ISIS)

ಭೀಕರ ಉಗ್ರ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 145ಕ್ಕು ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಷ್ಯಾದ ಮಾಸ್ಕೋ ನಗರದಲ್ಲಿ ಲ್ಲಿ ನಡೆದಿದೆ.

ಇದನ್ನೂ ಓದಿ: Kate Middleton: ಕೇಟ್‌ ಮಿಡಲ್ಟನ್‌ಗೆ ಕ್ಯಾನ್ಸರ್‌; ವೀಡಿಯೋ ಸಂದೇಶ ಇಲ್ಲಿದೆ

ಅಧ್ಯಕ್ಷ ವ್ಹಾಡಿಮಿರ್ ಪುಟಿನ್ ಅವರು ಇತ್ತೀಚಿಗೆ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಮೇಲೆ ಹಿಡಿತ ಸಾಧಿಸಿದ ಕೆಲವೇ ದಿನಗಳಲ್ಲಿ ಭಯೋತ್ಪಾದಕರು ಮಾಸ್ಕೋದ ದೊಡ್ಡ ಕನ್ಸರ್ಟ್ ಹಾಲ್‌ ನಲ್ಲಿ ಏಕಾಏಕಿ ದಾಳಿ ನಡೆಸಿ, 60 ಕ್ಕೂ ಹೆಚ್ಚು ಜನರನ್ನು ಕೊಂದಿದ್ದು, 145 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ: Praveen Maddadka: ‘ನೀಲಿ ಶಾಲು’ ಪೋಸ್ಟ್ ಮೂಲಕ ದಲಿತರ ನಿಂದನೆ: ಕಾವಂದನ ಭಕ್ತ ಆರೋಪಿ ಪ್ರವೀಣ್ ಮದ್ದಡ್ಕನ ವಿರುದ್ದ ಎಫ್.ಐ ಆರ್ !

ಇಸ್ಲಾಮಿಕ್ ಸ್ಟೇಟ್ ಉಗ್ರರ ಗುಂಪು ISIL(ISIS) ಸಾಮಾಜಿಕ ಮಾಧ್ಯಮದಲ್ಲಿ ಸಂಯೋಜಿತ ಚಾನೆಲ್‌ಗಳಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಒಂದು ತಿಂಗಳ ಮುಂಚೆಯೇ ಅಮೆರಿಕ ಗುಪ್ತಚರ ಸಂಸ್ಥೆಯು ಇಸ್ಲಾಮಿಕ್ ಸ್ಟೇಟ್ ಗುಂಪು ಮಾಸ್ಕೋದಲ್ಲಿ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ರಷ್ಯಾದ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಯುಎಸ್ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿಯ ನಂತರ ದಾಳಿಕೋರರಿಗೆ ಏನಾಯಿತು ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ. ಅಧಿಕಾರಿಗಳು ಭಯೋತ್ಪಾದನಾ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕೃತ್ಯವನ್ನು ಖಂಡಿಸಿರುವ ಮಾಸ್ಕೋ ಮೇಯ‌ರ್ ಸೆರ್ಗೆಯ್ ಸೊಬಯಾನಿನ್ ಈ ದಾಳಿಯನ್ನು “ದೊಡ್ಡ ದುರಂತ” ಎಂದು ಕರೆದಿದ್ದಾರೆ.

ದಾಳಿಕೋರರು ಸ್ಫೋಟಕಗಳನ್ನು ಸಿಡಿಸಿದ ನಂತರ ಉಂಟಾದ ಬೆಂಕಿಯಿಂದ ಹೆಚ್ಚಿನ ಸಾವು ಸಂಭವಿಸಿರಬಹುದು ಎಂದು ರಷ್ಯಾದ ಕೆಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ‌.

Leave A Reply

Your email address will not be published.