Udupi Chikmagaluru Constituency: ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲೀಷ್‌ ಬರಲ್ಲ, ಅವರನ್ನು ಗೆಲ್ಲಿಸಬೇಡಿ-ಜೆಪಿ ಹೆಗ್ಡೆ

Udupi: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಎಂದೇ ಪ್ರಖ್ಯಾತಿ ಪಡೆದ ಕೋಟ ಶ್ರೀನಿವಾಸ ಪೂಜಾರಿ ಜೊತೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಯಪ್ರಕಾಶ್‌ ಹೆಗ್ಡೆ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: Russia: ರಷ್ಯಾದಲ್ಲಿ ಉಗ್ರ ದಾಳಿ : ಕಾನ್ಸರ್ಟ್ ಹಾಲ್ ನಲ್ಲಿ 60 ಮಂದಿ ಸಾವು 145 ಮಂದಿ ಗಂಭೀರ ಗಾಯ : ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಗ್ರೂಪ್ (ISIS)

ಈಗ ಜೆಪಿ ಹೆಗ್ಡೆ ಅವರು ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ತುಸು ಭಾರವಾದ ಮಾತನ್ನೇ ಆಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲೀಷ್‌ ಬರೋಲ್ಲ, ಹಾಗಾಗಿ ಅವರನ್ನು ಗೆಲ್ಲಿಸಬೇಡಿ ಎಂಬ ಹೇಳಿಕೆ ನೀಡಿದ್ದಾರೆ. ಸಂಸದರಾದವರು ದೆಹಲಿಯಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳ ಜೊತೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಹಿಂದಿ ಅಥವಾ ಇಂಗ್ಲೀಷ್‌ ಬರದೇ ಲೋಕಸಭೆಯಲ್ಲಿ ವ್ಯವಹಾರ ಕಷ್ಟ. ಕಚೇರಿ ವ್ಯವಹಾರಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಭಾಷಾಂತರಕಾರರಿಗೆ ಅವಕಾಶ ಇರಲ್ಲ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ: Kate Middleton: ಕೇಟ್‌ ಮಿಡಲ್ಟನ್‌ಗೆ ಕ್ಯಾನ್ಸರ್‌; ವೀಡಿಯೋ ಸಂದೇಶ ಇಲ್ಲಿದೆ

ಬಿಜೆಪಿ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೇ ಹಿಂದಿ ಅಥವಾ ಇಂಗ್ಲೀಷ್‌ ಬರಲ್ಲ ಎಂದು ಬ್ರಹ್ಮಾವರ ಚುನಾವಣಾ ಸಭೆಯಲ್ಲಿ ಹೇಳಿದ್ದಾರೆ.

ಕೋಟ ಅವರಿಗೆ ಹಿಂದಿ ಅಥವಾ ಇಂಗ್ಲೀಷ್‌ ಬರುವುದಿಲ್ಲ. ಹಾಗಾಗಿ ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ ಎಂದು ಹೇಳಿರುವ ವಿಡಿಯೋವೊಂದು ವೈರಲ್‌ ಆಗಿದೆ. ಕನ್ನಡದಲ್ಲಿ ಭಾಷಣ ಮಾಡಿದರೆ ಕೇಳುವುದಿಲ್ಲ. ಇಂಗ್ಲೀಷ್‌ , ಹಿಂದಿಯಲ್ಲಿ ಮಾತನಾಡಿದರೆ ಸಂಸದರು ಕೇಳುತ್ತಾರೆ ಎಂದು ಹೇಳಿದ್ದಾರೆ.

ಇದಕ್ಕೆ ರಿಪ್ಲೈ ಆಗಿ ಕೋಟ ಅವರು ತಿರುಗೇಟು ನೀಡಿದ್ದಾರೆ. ತಾವು ಸಂಸದರಾಗುತ್ತಿದ್ದಂತೇ ಆರು ತಿಂಗಳಲ್ಲಿ ಹಿಂದಿ ಕಲಿತು ತೋರಿಸುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ.

Leave A Reply

Your email address will not be published.