Love Tragedy: ಅವರಿಬ್ಬರದ್ದು ನಿರ್ಮಲ ಪ್ರೇಮ; ಅದಕ್ಕೆ ಅಡ್ಡಿಯಾಗಿತ್ತು ಅಂತಸ್ತು, ಅಣ್ಣಂದಿರಿಂದ ಮಾಸ್ಟರ್‌ ಪ್ಲ್ಯಾನ್‌, ಪ್ರಿಯಕರ ಮರ್ಡರ್‌

Tragedy Love Story: ಆ ಇಬ್ಬರು ನಿಜಕ್ಕೂ ಪ್ರಾಣಕ್ಕಿಂತ ಹೆಚ್ಚಾಗಿಯೇ ಪ್ರೀತಿಸುತ್ತಿದ್ದರು. ತಮ್ಮ ಮುಂದಿನ ಭವಿಷ್ಯದ ಕುರಿತು ಕನಸು ಕಂಡಿದ್ದರು. ಇದೆಲ್ಲ ಎಲ್ಲಾ ಪ್ರೇಮಿಗಳು ಕಾಣುವ ಕನಸು. ಆದರೆ ಎಲ್ಲಾ ಲವ್‌ ಸ್ಟೋರಿಗಳು ಗೆಲುವು ಕಾಣುವುದಿಲ್ಲ. ಕೆಲವು ಫೇಲ್‌ ಕೂಡಾ ಆಗುತ್ತದೆ. ಅಂತಹ ಒಂದು ಲವ್‌ಸ್ಟೋರಿ ಇದು. ಈ ಲವ್‌ಸ್ಟೋರಿ ನಿಜಕ್ಕೂ ಇಡೀ ಮಲೆನಾಡು ಬೆಚ್ಚಿಬೀಳುವಂತೆ ಮರ್ಡರ್‌ ಮಾಡಿದ್ದು, ಈ ಟ್ರಾಜೆಡಿ ಲವ್‌ ಸ್ಟೋರಿ ಕುರಿತು ತಿಳಿಯುವ.

ಇದನ್ನೂ ಓದಿ: Uttar Pradesh: ಮದರಸಾ ಕಾಯ್ದೆ ಅಸಾಂವಿಧಾನಿಕ : ಹೈಕೋರ್ಟ್

ಈ ಪ್ರೇಮಿಯ ಜೀವಂತ ದಹನ ನಡೆದಿರುವುದು ಮಾ.16 ರಂದು. ಶನಿವಾರ ಬೆಳಗ್ಗೆ ಸಮಯದಲ್ಲೇ ಇನ್ನೋವಾ ಕಾರ್‌ ಸಹಿತ ಓರ್ವ ಯುವಕನನ್ನು ಸುಟ್ಟು ಹಾಕಲಾಗಿತ್ತು. ಪೊಲೀಸರಿಗೆ ವಿಷಯ ತಿಳಿದು ತನಿಖೆ ನಡೆಸಿದಾಗ ಗೊತ್ತಾಗಿದ್ದೇ ಈ ಇನ್ನೋವಾ ಕಾರು ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ ಸುನಿಲ್‌ ಎನ್ನುವವರದ್ದು ಎಂದು. ನಂತರ ಸುನೀಲ್‌ ಮೂಲಕ ಈ ಕಾರಿನಲ್ಲಿರುವ ವ್ಯಕ್ತಿ ಯಾರು ಎನ್ನುವುದು ಪೊಲೀಸರಿಗೆ ಅನಂತರ ತಿಳಿದಿದೆ.

ಇದನ್ನೂ ಓದಿ: Bappanadu Temple: ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ಮತ್ತೆ ಧರ್ಮ ದಂಗಲ್‌ ; ಅನ್ಯಮತೀಯರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಬೇಡ ಎಂಬ ಆಗ್ರಹ

ಕಾರಿನಲ್ಲಿ ಸುಟ್ಟು ಹೋಗಿರುವುದು 27 ವರ್ಷದ ಗಾಡಿಕೊಪ್ಪದ ನಿವಾಸಿ ವೀರೇಶ್‌ ಎಂಬ ಯುವಕ. ಈತ ಶಿವಮೊಗ್ಗದ ಚೋರಡಿಯಲ್ಲಿರುವ ಅಡಿಕೆ ತೋಟದಲ್ಲಿ ವ್ಯವಸಾಯ ಜೊತೆಗೆ ಡ್ರೈವಿಂಗ್‌ ಕೆಲಸ ಮಾಡುತ್ತಿದ್ದ. ವಿರೇಶ್‌ ತನ್ನ ತಂದೆ ತಾಯಿಗೆ ಒಬ್ಬನೇ ಮಗ. ಎರಡು ವರ್ಷದ ಹಿಂದೆ ಅಕ್ಕ ಕಾವ್ಯ ಕ್ಯಾನ್ಸರ್‌ನಿಂದ ಮೃತ ಹೊಂದಿದ್ದಳು.

ಈತನ ಲವ್ವರೇ ಅಂಕಿತಾ ಎಂಬ 21ವರ್ಷದ ಫಾರ್ಮಸಿ ವಿದ್ಯಾರ್ಥಿನಿ. ಈಕೆ ಬೇರೆ ಯಾರೂ ಅಲ್ಲ ವೀರೇಶನ ಮಾವನ ಮಗಳು. ಈಕೆಯ ಗ್ರಾಮ ಹಾವೇರಿ ಜಿಲ್ಲೆಯಲ್ಲಿದೆ. ಶಿವಮೊಗ್ಗದ ಪಿಜಿಯೊಂದರಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿರೇಶನಿಗೆ ಪರಿಚಯವಿದ್ದ ಈಕೆ

ಇಬ್ಬರೂ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದಳು. ಇವರಿಬ್ಬರ ಲವ್‌ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆದರೆ ಇತ್ತೀಚೆಗಷ್ಟೇ ವೀರೇಶ ತನ್ನ ತಾಯಿಯನ್ನು ತನ್ನ ಲವ್‌ ಕುರಿತು ಹೇಳಿದ್ದಾನೆ. ಆಗ ಅಮ್ಮ ಸಂಬಂಧಿಕರಲ್ಲಿ ಮದುವೆ ಬೇಡ ಎಂದು ಹೇಳಿದ್ದರು. ಆದರೆ ಪ್ರೀತಿ ಕುರುಡು ನೋಡಿ, ವೀರೇಶ ಮಾತ್ರ ಅಂಕಿತಾಳನ್ನೇ ಮದುವೆಯಾಗುವುದಾಗಿ ಪಣ ತೊಟ್ಟಿದ್ದ.

ಅನಂತರ ಇವರಿಬ್ಬರು ಪ್ರೀತಿಯ ವಿಷಯವನ್ನು ವಿರೇಶ್‌ ಮನೆಯವರು ಯುವತಿ ಮನೆಯವರಿಗೆ ಫೋನ್‌ ಮೂಲಕ ತಿಳಿಸಿದ್ದರು. ಆಗ ಯುವತಿ ಕಡೆಯಲು ಚೆನ್ನಾಗಿಯೇ ಬೈದಿದ್ದಾರೆ. ನಿಮ್ಮ ಹುಡುಗನಿಗೆ ನಮ್ಮ ಮನೆ ಹುಡುಗಿನೇ ಬೇಕಾ? ಪ್ರೀತಿ ಗೀತಿ ಅಂತ ಬಂದರೆ ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಲಾಗಿದೆ. ಇದನ್ನು ಕೇಳಿಸಿದ ವೀರೇಶ್‌ ಕುಟುಂಬದವರು ಸುಮ್ಮನಾಗಿದ್ದರು.

ಆದರೆ ಮಾರ್ಚ್‌ 15 ರಂದು ಮಧ್ಯಾಹ್ನ ಅಂಕಿತಾ ದೊಡ್ಡಪ್ಪನ ಮಗ ಪ್ರವೀಣ್‌, ಪ್ರಶಾಂತ್‌, ಪ್ರಭು ಈ ಮೂವರು ಶಿವಮೊಗ್ಗದ ವಿರೇಶ್‌ ಮನೆಗೆ ಟಾಟಾ ನೆಕ್ಸಾನ್‌ ಕಾರಿನಲ್ಲಿ ಬಂದಿದ್ದಾರೆ. ನಂತರ ಅಂಕಿತಾಳ ಫೋಟೋಗಳನ್ನು ಡಿಲೀಟ್‌ ಮಾಡಿಸಿದ್ದಾನೆ. ಆರು ತಿಂಗಳು ಸುಮ್ಮನಿರು ಆಮೇಲೆ ಮದುವೆ ಬಗ್ಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಂಬಿದ ವೀರೇಶ ತನ್ನ ಮೊಬೈಲಿನಲ್ಲಿದ್ದ ಇಬ್ಬರ ಫೋಟೋಗಳನ್ನೆಲ್ಲ ಡಿಲೀಟ್‌ ಮಾಡಿದ್ದಾನೆ.

ಅದಾದ ನಂತರ ಅಂಕಿತಾಳ ಅಣ್ಣ ಆತನ ಸ್ನೇಹಿತರು ಶಿವಮೊಗ್ಗದ ವಿರೇಶ್‌ ಮನೆಯಿಂದ ಮಧ್ಯಾಹ್ನ 3.30 ಕ್ಕೆ ಹೊರಟಿದ್ದು, ನಂತರ ಸಂಜೆ ಸುಮಾರು 5.30 ರ ಗಂಟೆಗೆ ಅಂಕಿತಾಳ ಅಣ್ಣ ಪ್ರವೀಣ ವಿರೇಶನಿಗೆ ಕಾಲ್‌ ಮಾಡಿದ್ದು, ರಾತ್ರಿ 10.30 ಕ್ಕೆ ಅಂಕಿತಾಳನ್ನು ಹಾನಗಲ್‌ ನಾಗರ ಕ್ರಾಸ್‌ ವರೆಗೆ ಕರೆದುಕೊಂಡು ಬರುತ್ತೇನೆ. ಅಲ್ಲಿಂದ ನೀನು ಅವಳನ್ನು ಎಲ್ಲಿಗಾದರೂ ಕರೆದುಕೊಂಡು ಹೋಗು, ಸಿರಸಿಯಲ್ಲಿ ನಾನೇ ನಿಮಗೊಂದು ರೂಂ ಮಾಡುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪಿದ ವೀರೇಶ್‌ ಆಯ್ತು ಎಂದು ಹೇಳಿ ಹೋಗುತ್ತಾನೆ. ಶಿವಮೊಗ್ಗದ ಮಾರಿಕಾಂಬ ಜಾತ್ರೆಗೆ ಹೋಗಿ ಬಂದ ವಿರೇಶ್‌ ನಂತರ ಮನೆಗೆ ತಲುಪುವಾಗ 9.30 ಕ್ಕೆ. ಈ ನಡುವೆ ಪ್ರವೀಣ ಪದೇ ಪದೇ ಕಾಲ್‌ ಮಾಡಿದ್ದಾನೆ.

ತಾಯಿಗೆ ವಿಷಯ ತಿಳಿಸಿ ಅಲ್ಲಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾನೆ. ಆಗ ತಾಯಿ ಕತ್ತಲಾಗಿದೆ ಬೇಡ ಎಂದು ಹೇಳುತ್ತಾರೆ.ಇತ್ತ ಪ್ರವೀಣ ಪದೇ ಪದೇ ಫೋನ್‌ ಮಾಡಿ ಅಂಕಿತಾ ಹಠ ಮಾಡುತ್ತಿದ್ದಾಳೆ, ನಿನ್ನ ಭೇಟಿ ಆಗಬೇಕಂತೆ ಎಂದೆಲ್ಲ ಸುಳ್ಳಿನ ಕಥೆ ಹೇಳಿದ್ದಾನೆ. ಏನೋ ಅಪಾಯವಿದೆ ಎಂದು ವಿರೇಶ್‌ ಆತಂಕಕ್ಕೊಳಗಾಗಿ ಹೋಗಿದ್ದಾನೆ. ಇತ್ತ ಪ್ರವೀಣ ವೀರೇಶನ ತಾಯಿಗೂ ಫೋನ್‌ ಮಾಡಿ ತನ್ನ ಸುಳ್ಳಿನ ಕಥೆಯನ್ನು ಹೇಳಿದ್ದಾನೆ. ತಾಯಿ ನಂಬಿ ಮಗನನ್ನು ಅಲ್ಲಿಗೆ ಹೋಗಲು ಒಪ್ಪಿದ್ದಾಳೆ. ಹೋಗುವಾಗ ವೀರೇಶ ತಾಯಿ ಬಳಿಯಿಂದ ಎರಡು ಲಕ್ಷ ತೆಗೆದುಕೊಂಡು ಹೋಗುತ್ತಾನೆ.

ಟೆನ್‌ಶನ್‌ನಲ್ಲಿದ್ದ ವೀರೇಶ ತನ್ನ ಸ್ನೇಹಿತ ಸುನೀಲನ ಗಾಡಿಯನ್ನು ತೆಗೆದುಕೊಂಡು ಹೋಗುತ್ತಾನೆ. ಅದೇ ಕೊನೆ ಪ್ರವೀಣ ಮತ್ತು ಸಂಗಡಿಗರು ಈತನನ್ನು ಅಮಾನುಷವಾಗಿ ಕೊಲೆ ಮಾಡುತ್ತಾರೆ. ಇತ್ತ ತಾಯಿ ಮನೆಗೆ ಮಗ ಬಂದಿಲ್ಲ ಎಂದು ಕರೆ ಮಾಡಿದಾಗ ಫೋನ್‌ ಸ್ವಿಚ್ಡ್‌ ಆಫ್‌. ಪ್ರವೀಣನಿಗೆ ಕಾಲ್‌ ಮಾಡಿದಾಗ ಆತ ಬಂದೇ ಇಲ್ಲ. ನಾವು ವಾಪಸ್‌ ಹೋಗುತ್ತಿದ್ದೇವೆ ಎಂದು ಹೇಳಿದ್ದಾನೆ.

ಮರುದಿನ ಬೆಳಗ್ಗೆ ತಾಯಿ ಪೊಲೀಸ್‌ ಠಾಣೆಗೆ ಹೋಗಿ ಮಗನ ಮಿಸ್ಸಿಂಗ್‌ ಕೇಸ್‌ ದೂರು ನೀಡುತ್ತಾಳೆ. ನಂತರ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸಮೀಪದ ತೊಗರ್ಸಿ ಬಳಿ ಇನ್ನೋವಾ ಕಾರಿನಲ್ಲಿ ಒಬ್ಬ ವ್ಯಕ್ತಿಯನ್ನು ಸುಟ್ಟು ಹಾಕಿರುವುದು ಗೊತ್ತಾಗುತ್ತದೆ. ಆರೋಪಿಗಳು ತಾವೇ ಕೊಲೆಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ. ತಮ್ಮ ತಂಗಿ ಕೆಳ ಅಂತಸ್ತಿನ ಹುಡುಗನನ್ನು ಮದುವೆಯಾಗುವುದಾಗಿ ನಮಗಿಷ್ಟವಿರಲಿಲ್ಲ. ಬೇಡ ಅಂದರೂ ಕೇಳದೇ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು ಅದಕ್ಕೆ ಕೊಲೆ ಮಾಡಿದ್ದೀವಿ ಎಂದು ಆರೋಪಿಗಳು ಹೇಳಿದ್ದಾರೆ.

Leave A Reply

Your email address will not be published.