Home Crime Bengaluru: ಉಡುಪಿ ಉದ್ಯಮಿ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್‌

Bengaluru: ಉಡುಪಿ ಉದ್ಯಮಿ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್‌

Bengaluru

Hindu neighbor gifts plot of land

Hindu neighbour gifts land to Muslim journalist

Udupi News: ಬೆಂಗಳೂರಿನ ಜೆ.ಪಿ.ನಗರದಲ್ಲಿ ಉಡುಪಿ ಮೂಲದ ಉದ್ಯಮಿ ಕುಟುಂಬದ ಮೂವರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಚಕ ಟ್ವಿಸ್ಟ್‌ವೊಂದು ದೊರಕಿದೆ. ಪೊಲೀಸರಿಗೆ ಕುಟುಂಬದ ಸದಸ್ಯರು ಬೆಂಕಿ ಹಚ್ಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Congress: ಕಾಂಗ್ರೆಸ್ ಫೈನಲ್ ಪಟ್ಟಿ ಬಿಡುಗಡೆಗೆ ಅಂತಿಮ ಕ್ಷಣಗಣನೆ; ಯಾರಿಗೆಲ್ಲ ಟಿಕೆಟ್‌?

ಪೊಲೀಸರು ಸ್ಥಳ ಪರಿಶೀಲನೆ ಮಾಡಿದಾಗ ಈ ದುರ್ಘಟನೆಗೆ ಮೂರ್ನಾಲ್ಕು ಕಾರಣಗಳು ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಕುಟುಂಬದ ಫ್ಯಾಕ್ಟರಿ ನಷ್ಟವಾಗಿತ್ತು. ಹಾಗಾಗಿ ಬ್ಯಾಂಕ್‌ನವರು ಸಾಲ ವಸೂಲಿಗೆಂದು ಬಂದು ಕಿರುಕುಳ ನೀಡಿದ್ದರು ಎಂದು ಮೊದಲಿಗೆ ಹೇಳಲಾಗಿತ್ತು. ಆ ಕಾರಣದಲ್ಲಿ ಬೆಂಕಿ ಹಚ್ಚಿಕೊಂಡು ಮನೆಯವರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: Education Board: 5,8,9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ- ಮಹತ್ವದ ಮಾಹಿತಿ ಹಂಚಿಕೊಂಡ ಶಿಕ್ಷಣ ಇಲಾಖೆ

ಉಡುಪಿ ಮೂಲದವರಾದ ಜಯಾನಂದ್‌ ಅವರು ವುಡ್‌ ಡೈ ಮೇಕಿಂಗ್‌ ಫ್ಯಾಕ್ಟರಿಯೊಂದನ್ನು ಆರಂಭಿಸಿದ್ದರು. ಆದರೆ ಈ ಫ್ಯಾಕ್ಟರಿ ನಷ್ಟಕ್ಕೀಡಾಗಿದ್ದರಿಂದ ಅದನ್ನು ಮುಚ್ಚಿದ್ದರು. ಹಾಗಾಗಿ ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್‌ ಬಾಟಲಿಗಳನ್ನು ಹಾಗೂ ಡೈ ಮೇಕಿಂಗ್‌ ಆಯಿಲ್‌ಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ನಿನ್ನೆ ಬ್ಯಾಂಕಿನವರು ಸಾಲ ವಸೂಲಿಗೆಂದು ಬಂದಾಗ ಗೌರವಕ್ಕೆ ಧಕ್ಕೆ ಉಂಟಾಗಿತ್ತು. ಇದರಿಂದ ನೊಂದ ಕುಟುಂಬ ರಾತ್ರಿಯೆಲ್ಲಾ ಚಿಂತೆ ಮಾಡಿ ಬೆಳಗ್ಗಿನ ಸಮಯದಲ್ಲಿ ತಾಯಿ ಸುಕನ್ಯಾ, ಮಕ್ಕಳಾದ ನಿಶ್ಚಿತ್‌ (ಅಂಗವಿಕಲ) ಹಾಗೂ ನಿಖಿತ್‌ ಬಾಗಿಲು ಹಾಕಿ ಮನೆಯಲ್ಲಿ ತಂದಿಟ್ಟಿದ್ದ ಫ್ಯಾಕ್ಟರಿಯ ಕೆಮಿಕಲ್‌ ಬಾಟಲಿಯನ್ನು ತೆರೆದು ಅದನ್ನು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಆದರೂ ಈ ಸಾವಿನ ಕುರಿತು ಮತ್ತಷ್ಟು ಅನುಮಾನಗಳು ಮೂಡಿದೆ. ಎಫ್‌ಎಸ್‌ಎಲ್‌ ವರದಿ ಬಂದ ಬಳಿಕವೇ ನಿಜಾಂಶ ಗೊತ್ತಾಗಲಿದೆ ಎನ್ನಲಾಗಿದೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಪೊಲೀಸರ ತನಿಖೆ ಮುಂದುವರಿದಿದೆ.