Actress Priyanka Chopra: ಅಯೋಧ್ಯೆಯ ರಾಮಮಂದಿರದಲ್ಲಿ ಕುಟುಂಬ ಸಮೇತ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನ ಕ್ವೀನ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಪ್ರಸ್ತುತ ತಮ್ಮ ಮಗಳು ಮಾಲ್ಟಿ ಮೇರಿ ಮತ್ತು ಪತಿ ನಿಕ್ ಜಾನಸ್ ಅವರೊಂದಿಗೆ ಅಯೋಧ್ಯೆಯ ರಾಮಮಂದಿರಕ್ಕೆ ದಿಡೀರ್ ಭೇಟಿ ನೀಡಿದ್ದಾರೆ.
ದೇಗುಲದಲ್ಲಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಆಕೆಯ ತಾಯಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಮ್ಮ ನೆಚ್ಚಿನ ನಟಿಯನ್ನು ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ವೈರಲ್ ಭಯಾನಿ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ , ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ. ನಿಕ್ ಜೋನಸ್ ಕೆನೆ ಬಣ್ಣದ ಕಸೂತಿ ಮಾಡಲಾದ ಕುರ್ತಾ ಮತ್ತು ಪೈಜಾಮ ಧರಿಸಿದ್ದಾರೆ. ಇನ್ನು ಮಗಳು ಮಾಲ್ಟಿ ಸಾಂಪ್ರದಾಯಿಕ ಉಡುಪಿನಲ್ಲಿ ಬಹಳ ಮುದ್ದಾಗಿ ಕಾಣುತ್ತಿದ್ದಳು.
ಇನ್ನೇನು ಹೋಳಿ ಹಬ್ಬ ಸಮೀಪಿಸುತ್ತಿದ್ದು ಪ್ರಿಯಾಂಕಾ ಮತ್ತು ನಿಕ್ ಭಾರತಕ್ಕೆ ಬಂದಿರುವಂತೆ ತೋರುತ್ತಿದೆ. ದಂಪತಿಗಳು ತಮ್ಮ ಮಗಳು ಮಾಲ್ಟಿ ಮೇರಿಯೊಂದಿಗೆ ಮುಂಬೈಗೆ ಆಗಮಿಸಿದ್ದಾರೆ. ಇದು ಮಾಲ್ಟಿ ಮೇರಿ ಅವರ ಎರಡನೇ ಭಾರತ ಭೇಟಿಯಾಗಿದೆ .