Terrible Accident: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಮೂರು ಜನ ದಾರುಣ ಸಾವು

Share the Article

ಹಳೆಯಂಗಡಿ ಮೂಲದ ದಂಪತಿ ಹಾಗೂ ನಾಲ್ಕು ತಿಂಗಳ ಮಗು ಸೇರಿದಂತೆ ಮೂರು ಜನ ಸೌದಿ ಅರೇಬಿಯಾದ ರಿಯಾದ್ ಹಾಗೂ ಮೆಕ್ಕಾ ಹೆದ್ದಾರಿಯ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಅಲ್ ಕಸ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Political News: ”ವಿಕಸಿತ ಭಾರತ” ಸಂದೇಶ ಕಳುಹಿಸುವುದನ್ನು ನಿಲ್ಲಿಸಿ : ಕೇಂದ್ರಕ್ಕೆ ಚುನಾವಣಾ ಆಯೋಗದ ಖಡಕ್ ಸೂಚನೆ

ಈ ಕುಟುಂಬವು ಕತಾರ್ ನಿಂದ ಮಕ್ಕಾಗೆ  ತೆರಲುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಮೃತ ದುರ್ದೈವಿಗಳನ್ನು ಮಕ್ಕಾ ಡಿಕೆಎಸ್ಸಿಸಿ ಮುಖಂಡ ಇಬ್ರಾಹಿಂ ಕನ್ನಂಗಾರ್ ಸಂಬಂಧಿಕರು ಎಂಬುದಾಗಿ ಮೂಲಗಳು ತಿಳಿಸಿವೆ.

ಆದರೆ ಇದುವರೆಗೂ ಈ ಅಪಘಾತಕ್ಕೆ ಕಾರಣವೇನು ಎಂಬುದು ಇದುವರೆಗೂ ತಿಳಿದುಬಂದಿಲ್ಲ, ಸೌದಿ ಅರೇಬಿಯಾ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave A Reply