Intresting News: ಮನೆಕೆಲಸ ಮಾಡಿದ್ದಕ್ಕಾಗಿ ಗಂಡನಿಂದ 79 ಲಕ್ಷ ಪರಿಹಾರ ಪಡೆದ ಪತ್ನಿ
ಸಾಮಾನ್ಯವಾಗಿ ಮಹಿಳೆಯರು ಕುಟುಂಬದವರ ಕಾಳಜಿ ವಹಿಸಿಸಲು, ಗೃಹಿಣಿಯಾಗಿ ಮನೆಯ ಎಲ್ಲಾ ಕೆಲಸಗಳನ್ನೂ ನಿಭಾಯಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತಾನು ಮಾಡಿದ ಕೆಲಸಕ್ಕಾಗಿ ಗಂಡನಿಂದ 75 ಲಕ್ಷ ಪರಿಹಾರ ತೆಗೆದುಕೊಂಡಿರುವ ಅಪರೂಪದ ಘಟನೆ ನಡೆದಿದೆ.
ಇದನ್ನೂ ಓದಿ: Israel Airstrike : ಹಮಾಸ್ ಉನ್ನತ ಮಿಲಿಟರಿ ಕಮಾಂಡರ್ ಮಾರ್ವಾನ್ ಇಸ್ಸಾ ಹತ್ಯೆ
ಮಹಿಳೆಯೊಬ್ಬರು, ತನ್ನ ಪತಿ ತಾನು 26 ವರ್ಷಗಳ ಕಾಲ ಗೃಹಿಣಿಯಾಗಿ ಮಾಡಿದ ಮನೆ ಕೆಲಸಗಳಿಗೆ ಸಂಬಳ ಕೊಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ, ನ್ಯಾಯಾಲಯವು ಮಹಿಳೆಗೆ ಸುಮಾರು 79 ಲಕ್ಷ 48 ಸಾವಿರ ರೂಪಾಯಿ ಪರಿಹಾರವನ್ನು ನೀಡುವಂತೆ ಆಕೆಯ ಪತಿಗೆ ಆದೇಶಿಸಿದೆ. ಅಸಲಿಗೆ ಈ ಘಟನೆ ನಡೆದಿರುವುದು ಸ್ಪೇನ್ ದೇಶದಲ್ಲಿ
ಇದನ್ನೂ ಓದಿ: Actress Kiara: ಐಸ್-ಬ್ಲೂ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಕಿಯಾರ
ಸಾಮಾನ್ಯವಾಗಿ ಗೃಹಿಣಿಯ ಕೆಲಸವನ್ನು ಯಾವಾಗಲೂ ಕಡೆಗಣಿಸಲಾಗುತ್ತದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ , ವಿಶ್ವದಾದ್ಯಂತ ಇದೆ ರೀತಿ ನಡೆಯುತ್ತದೆ. ಪುರುಷರು ತಾವು ಕಚೇರಿಯಲ್ಲಿ ತಾವು ಮಾತ್ರ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ, ನಾವು ಮಾತ್ರ ಸಂಬಳತಂದು ಮನೆಯನ್ನು ಸಾಕುತ್ತಿದ್ದೇವೆ ಎಂದುಕೊಳ್ಳುತ್ತಾರೆ, ಆದರೆ ಹೆಂಡತಿಯೂ ಸಹ ದಿನವಿಡೀ ಮನೆಕೆಲಸ ಮಾಡುತ್ತಾಳೆ ಎಂದು ಅವರು ಭಾವಿಸುವುದಿಲ್ಲ. ವಾಸ್ತವವಾಗಿ, ಮನೆಕೆಲಸವು ಒಂದು ಕೆಲಸವೇ ಅಲ್ಲ ಎಂದು ಅವರು ಭಾವಿಸುತ್ತಾರೆ, ಆದರೆ ನ್ಯಾಯಾಲಯವು ಈ ತೀರ್ಪು ನೀಡುವ ಮೂಲಕ ಪುರುಷರ ಚಿಂತನೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದೆ. ಈ ಬಗ್ಗೆ ದೊಡ್ಡ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಸ್ಪೇನ್ನ ಪೊಂಟೆವೆದ್ರಾದಲ್ಲಿನ ಪ್ರಾಂತೀಯ ನ್ಯಾಯಾಲಯವು ಇತ್ತೀಚೆಗೆ ತನ್ನ 26 ವರ್ಷಗಳ ಮದುವೆಯ ಅವಧಿಯಲ್ಲಿ ಗೃಹಿಣಿಯಾಗಿ ಕೆಲಸ ಮಾಡಿದ್ದಕ್ಕಾಗಿ ವ್ಯಕ್ತಿ ತನ್ನ ಮಾಜಿ ಪತ್ನಿಗೆ 88,025 ಯುರೋಗಳನ್ನು ಭಾರತೀಯ ಕರೆನ್ಸಿಯಲ್ಲಿ ಸುಮಾರು 7,948,000 ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಬೇಕು ಎಂದು ತೀರ್ಪು ನೀಡಿದೆ .
1996 ರಲ್ಲಿ ವಿವಾಹವಾದ ದಂಪತಿಗಳು ಕೆಲ ಭಿನ್ನಾಭಿಪ್ರಾಯಗಳಿಂದ 2022 ರಲ್ಲಿ ವಿಚ್ಛೇದನ ಪಡೆದಿದ್ದರು. ಸುಮಾರು 25 ವರ್ಷಗಳ ದಾಂಪತ್ಯ ಜೀವನದಲ್ಲಿ ಹೆಂಡತಿ ಮನೆಗೆಲಸ ಮಾಡಿ ಮಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದಳು. ಜೀವನ ನಿರ್ವಹಣೆಗೆ ಏನೂ ಸಿಗದ ಕಾರಣ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ನ್ಯಾಯಾಲಯ 25 ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಪತಿಯಿಂದ 76 ಲಕ್ಷ ರೂ. ಅವಳಿಗೆ ಪರಿಹಾರ ದೊರೆಯುವಂತೆ ಮಾಡಿದೆ.