Lok Sabha Election 2024: ನೀತಿ ಸಂಹಿತೆ ಜಾರಿ; ಬಸ್‌ನಲ್ಲಿ ಪ್ರಯಾಣಿಸುವವರು ಲಗೇಜ್‌ನಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ
Loksabha Election 2024: ಲೋಕಸಭೆ ಎಲೆಕ್ಷನ್ ಭರಾಟೆ ಇನ್ನು ಹೆಚ್ಚಾಗಲಿದೆ. ಈಗಾಗಲೇ ನಾಲ್ಕು ನಿಗಮದ ಬಸ್‌ಗಳಲ್ಲಿ ಪ್ರಯಾಣ ಮಾಡುವವರು ತಮ್ಮ ತಮ್ಮ ಲಗೇಜ್‌ನಲ್ಲಿ ಕೆಲವೊಂದು ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಈ ಮೂಲಕ ಪ್ರಯಾಣಿಕರಿಗೆ ರಾಜ್ಯಸಾರಿಗೆ ಬಸ್‌ಗಳಲ್ಲಿ ಲಗೇಜ್ ಸಾಗಿಸಲು ಕೆಲವೊಂದು ಕಟ್ಟಪ್ಪಣೆಗಳನ್ನು ಹೊರಡಿಸಲಾಗಿದೆ.
ಇದನ್ನೂ ಓದಿ: Physical Abuse: ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ
ಸೂಕ್ತ ದಾಖಲೆ ಅಥವಾ ನೀತಿ ಸಂಹಿತೆಗೆ ಧಕ್ಕೆ ಬರುವ ವಸ್ತುಗಳ ಸಾಗಾಟ ಮಾಡುವಂತಿಲ್ಲ. ಈ ಕುರಿತು ಚಾಲಕ ಹಾಗೂ ನಿರ್ವಾಹಕರಿಗೆ ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗದ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Urfi Javed: ತನ್ನ ಸ್ಕರ್ಟ್‌ನೊಳಗೆ ಇಡೀ ಬ್ರಹ್ಮಾಂಡವನ್ನೇ ತೋರಿಸಿದ ಉರ್ಫಿ
ಯಾವುದೇ ದಾಖಲೆ ಇಲ್ಲದೆ ಬೆಲೆಬಾಳುವ ವಸ್ತುಗಳನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ರಾಜಕೀಯ ವ್ಯಕ್ತಿಗೆ ಸಂಬಂಧಪಟ್ಟ ಕರಪತ್ರ, ಬ್ಯಾನರ್ ಇವೆಲ್ಲವನ್ನು ಸಾಗಣೆ ಮಾಡುತ್ತಿದ್ದಲ್ಲಿ ಸಂಬಂಧಪಟ್ಟ ದಾಖಲಾತಿ ಸಲ್ಲಿಸಬೇಕು. ರಾಜಕೀಯದ ಪ್ರಚಾರಕ್ಕೆಂದು ಬಳಸುವ ವಸ್ತುಗಳನ್ನು ಬಸ್ಸಿನಲ್ಲಿ ಪ್ರದರ್ಶನ ಮಾಡುವಂತಿಲ್ಲ. ಪ್ರಯಾಣಿಕರೊಂದಿಗೆ ಹಂಚುವಂತಿಲ್ಲ.
ಲಗೇಜ್‌ಗಳ ಪರಿಶೀಲನೆ ಅಗತ್ಯ. ಹಣ, ಚಿನ್ನ, ಬೆಳ್ಳಿ ಇತ್ಯಾದಿ ಸಾಗಿಸುವಂತಿಲ್ಲ. ನಿಷೇಧಿತ ವಸ್ತುಗಳನ್ನು ಕೂಡಾ ಸಾಗಿಸುವಂತಿಲ್ಲ. ಇವೆಲ್ಲದರ ಹೊರತಾಗಿ ಪ್ರಯಾಣಿಕರ ಲಗೇಜ್‌ನಲ್ಲಿ ಅನುಮಾನಾಸ್ಪದವಾಗಿ ಏನಾದರೂ ವಸ್ತುಗಳು ಕಂಡು ಬಂದರೆ ಚುನಾವಣಾ ನೀತಿ ಸಂಹಿತೆ ಸಂಬಂಧ ಸಿಬ್ಬಂದಿ ಪರಿಶೀಲನೆ ಮಾಡುವ ಅಧಿಕಾರ ಇದೆ. ಪ್ರಯಾಣಿಕ ತಕರಾರು ಮಾಡಿದರೆ ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ಸೂಚನೆ ನೀಡಲಾಗಿದೆ.