Actress Kiara: ಐಸ್-ಬ್ಲೂ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಕಿಯಾರ

Share the Article

ಕಿಯಾರಾ ಅಡ್ವಾಣಿಯವರು ನಟಿಯಾಗಿ ಮಾತ್ರವಲ್ಲದೆ ಫ್ಯಾಷನ್ ಲೋಕದಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯತೆಯಿಂದಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕಿಯಾರಾ ಧರಿಸಿರುವ ಧಿರಿಸಿನಿಂದಾಗಿ ಪ್ರಪಂಚದಾದ್ಯಂತದ ಫ್ಯಾಷನ್ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭದಲ್ಲಿ, ಕಿಯಾರಾ ಮತ್ತೊಮ್ಮೆ ತನ್ನ ರೆಡ್ ಕಾರ್ಪೆಟ್ ನ ಸುಂದರತೆಯನ್ನು ಹೆಚ್ಚಿಸಲು ತಮ್ಮ ಹೊಸ ಐಸ್-ಬ್ಲೂ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.

ಅವರು ಫೋಟೋ ಶೂಟ್ ಮಾಡಿಸಿದ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಕಾಡ್ಗಿಚ್ಚಿನಂತೆ ಎಲ್ಲೆಡೆ ವೈರಲ್ ಆಗಿದೆ. ಇನ್ನು ಅವರ ಅಭಿಮಾನಿಗಳಿಗಂತೂ ರಸದೌತಣ ನೀಡಿದಂತಾಗಿದೆ.

ಅವರ ಕೆಲ ಅಭಿಮಾನಿಗಳು ಕಾಮೆಂಟ್ ಬಾಕ್ಸ್ ನಲ್ಲಿ ಕಿಯಾರ ರಾಣಿ ಎಂದು ಬರೆದುಕೊಂಡರೆ, ಇನ್ನು ಕೆಲವು ಅಭಿಮಾನಿಗಳು ಕಿಲ್ಲರ್ ಬ್ಯೂಟಿ ಎಂದು ಸಹ ಬರೆದುಕೊಂಡಿದ್ದಾರೆ.

Leave A Reply