Mangaluru: ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಬಿಸಿಬಿಸಿ ಆಮ್ಲೆಟ್‌ ಮಾಡಿ ತಿಂದ ಕಿಡಿಗೇಡಿಗಳು

Mangaluru: ಅಂಗನವಾಡಿ ಕೇಂದ್ರವೊಂದಕ್ಕೆ ರಾತ್ರೋರಾತ್ರಿ ನುಗ್ಗಿರುವ ಕಿಡಿಗೇಡಿಗಳು ಪುಟ್ಟ ಮಕ್ಕಳಿಗೆಂದು ಇಟ್ಟಿದ್ದ ಮೊಟ್ಟೆಗಳನ್ನು ಒಡೆದು ಆಮ್ಲೆಟ್‌ ಮಾಡಿ ತಿಂದಿರುವ ಘಟನೆಯೊಂದು ಪುತ್ತೂರಿನ ನೆಲ್ಲಿಕಟ್ಟೆಯ ಸಮಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಅಷ್ಟು ಮಾತ್ರವಲ್ಲದೇ ಕಿಡಿಗೇಡಿಗಳು ಆರೋಗ್ಯ ಕೇಂದ್ರದ ಸೊತ್ತುಗಳನ್ನು ನಾಶ ಮಾಡಿ ಗಲೀಜು ಮಾಡಿದ್ದ ಪ್ರಕರಣವು ವಾರದ ನಂತರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್‌; ಕಾರಿನ ಗ್ಲಾಸ್‌ ಪುಡಿ ಪುಡಿ

ಅಂಗನವಾಡಿ ಕಾರ್ಯಕರ್ತೆ ಎಂದಿನಂತೆ ಬೆಳಗ್ಗೆ ಕರ್ತವ್ಯಕ್ಕೆಂದು ಬಂದಿದ್ದು, ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದು ಕಂಡಿದ್ದು, ಅಡುಗೆ ಕೋಣೆಯಲ್ಲಿ ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಆಮ್ಲೆಟ್‌ ಮಾಡಿ ತಿಂದಿರುವ ಕುರುಹು ಕೂಡಾ ಕಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪುತ್ತೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Puttur: ಬಿಜೆಪಿ ಅಭ್ಯರ್ಥಿಯನ್ನು ಅಧಿಕ ಬಹುಮತದಿಂದ ಗೆಲ್ಲಿಸುವ ಸಂಕಲ್ಪ- ಫೇಸ್‌ಬುಲ್‌ ಲೈವ್‌ ಬಂದು ಸಕ್ರಿಯ ರಾಜಕಾರಣದತ್ತ ಇನ್ನು ಮುಂದೆ ಎಂದು ಹೇಳಿದ ರಾಜಾರಾಮ್‌ ಭಟ್‌

1 Comment
  1. […] ಇದನ್ನೂ ಓದಿ: Mangaluru: ಅಂಗನವಾಡಿ ಕೇಂದ್ರಕ್ಕೆ ನ… […]

Leave A Reply

Your email address will not be published.