Hanuman Chalisa: ಹನುಮಾನ್‌ ಚಾಲೀಸ್‌ ಹಾಕಿದ್ದಕ್ಕೆ ಹಿಂದು ಯುವಕನಿಗೆ ಹಲ್ಲೆ ಪ್ರಕರಣ; ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್‌ ಕಿರಾತಕರ ಸ್ಟೇಟಸ್‌

Hanuman Chalisa: ಬೆಂಗಳೂರಿನ ನಗರ್ತ ಪೇಟೆಯ ಅಂಗಡಿಯಲ್ಲಿ ಹನುಮಾನ್‌ ಚಾಲೀಸ್‌ ಶ್ಲೋಕ ಹಾಕಿದ ಕಾರಣಕ್ಕೆ ಹಿಂದೂ ವ್ಯಾಪಾರಿಯೋರ್ವನ ಮೇಲೆ ಐವರು ಯುವಕರು ಹಲ್ಲೆ ನಡೆಸಿದ ಘಟನೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇದು ರಾಜಕೀಯ ತಿರುವುಗಳನ್ನು ಪಡೆದುಕೊಂಡು ಪ್ರತಿಭಟನೆ ಕೂಡಾ ನಡೆಯಿತು. ಆದರೆ ಇಷ್ಟೆಲ್ಲಾ ಆದರೂ ಅಮಾನುಷವಾಗಿ ಹಲ್ಲೆ ಮಾಡಿದ ಕಿರಾತಕರ ಗ್ಯಾಂಗ್‌ಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಕಾಣಿಸುತ್ತದೆ. ಇವರ ಅಹಂಕಾರ, ದುಷ್ತನ ಕ್ರೌರ್ಯ ಎಷ್ಟರ ಮಟ್ಟಿನಲ್ಲಿ ಇದೆ ಎಂದರೆ ಬಂಧಿತರಲ್ಲಿ ಓರ್ವನ ಸಹೋದರ ಸ್ಟೇಟಸ್‌ ಹಾಕಿದ್ದು, ಎಚ್ಚರಿಕೆಯನ್ನು ನೀಡಿದ್ದಾನೆ.

ಆರೋಪಿಗಳ ಬಂಧನವಾದ ಕೂಡಲೇ ಬಂಧಿತ ದುಷ್ಟನೋರ್ವರ ಸಹೋದರ ಹಾಕಿರುವ ಪೋಸ್ಟ್‌ ನಿಜಕ್ಕೂ ಯಾರನ್ನೂ ಸಿಟ್ಟಿಗೇಳಿಸುವಂತೆ ಮಾಡುತ್ತದೆ. ಇವತ್ತು ಜೈಲ್‌, ನಾಳೆ ಬೇಲ್‌, ಮತ್ತೆ ಅದೇ ಖೇಲ್‌. ಅಂದರೆ ಇವತ್ತು ಜೈಲಾಗುತ್ತೆ, ನಾಳೆ ಬೈಲಾಗುತ್ತೆ, ಆಮೇಲೆ ಮತ್ತದೇ ಆಟ ಶುರು ಮಾಡ್ತೀವಿ ಎಂಬ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದಾನೆ.

ಸುಲೇಮಾನ್‌ ಸಹೋದರ್‌ ಸೈಯದ್‌ ಹಾಕಿದ ಪೋಸ್ಟ್‌ ಹೀಗಿದೆ: ಆಜ್‌ ಜೈಲ್‌, ಕಲ್‌ ಬೇಲ್‌, ಫಿರ್‌ ವೊಹಿ ಪುರಾನಾ ಖೇಲ್‌!

ಈ ಹುಡುಗ ಅಪ್ರಾಪ್ತನಂತೆ ಕಾಣುತ್ತಿದ್ದು, ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ನಿರ್ಭಯವಾಗಿ ಎಚ್ಚರಿಕೆ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಎದ್ದು ನಿಂತಿದೆ.

Leave A Reply

Your email address will not be published.