Bagalakote : ಕಳ್ಳತನ ಮಾಡಿದ್ದಾಳೆಂದು ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರು – ನಂತರ ಆಗಿದ್ದೇ ಘೋರ ದುರಂತ !!

Bagalakote ಜಿಲ್ಲೆಯ ಕದಂಪುರದಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದ್ದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳ (Student) ಮೇಲೆ ಶಿಕ್ಷಕಿಯೊಬ್ಬರು ಕಳ್ಳತನದ ಆರೋಪ ಮಾಡಿ ಬಟ್ಟೆ ಬಿಚ್ಚಿ ಪರಿಶೀಲಿಸಿದ್ದಕ್ಕೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ದಿವ್ಯಾ ಬಾರಕೇರ (14) ಎಂದು ಗುರುತಿಸಲಾಗಿದ್ದು ಕದಾಂಪುರ ಗ್ರಾಮದ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಮಾರ್ಚ್ 16ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು ಶಾಲಾ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಹಾಗೂ ಮುಖ್ಯ ಶಿಕ್ಷಕ ಕೆ.ಹೆಚ್ ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ.

Ravi Belagere Writing: ‘ ಮತ್ತೆ ಬಂದ್ರು ಬೆಳಗೆರೆ ‘, ರವಿ ಬೆಳಗೆರೆ ಇಂಟರೆಸ್ಟಿಂಗ್ ಧಾರಾವಾಹಿ ಶುರು…

ಏನಿದು ಪ್ರಕರಣ?
ಮಾರ್ಚ್ 14ರಂದು ಕದಾಂಪುರ ಪ್ರೌಢಶಾಲೆಯ ಶಿಕ್ಷಕಿಯಾದ ಜಯಶ್ರೀ ಮಿಶ್ರಿಕೋಟಿ ಅವರ 2 ಸಾವಿರ ರೂ. ಕಳೆದು ಹೋಗಿದ್ದು, ವಿದ್ಯಾರ್ಥಿಗಳ ಬಳಿ ಯಾರು ತೆಗೆದುಕೊಂಡಿದ್ದೀರಿ ಎಂದು ವಿದ್ಯಾರ್ಥಿಗಳ ಬಳಿ ವಿಚಾರಿಸಿದ್ದರು. ಮಾರ್ಚ್ 15ರಂದು ಸಂಶಯದ ಮೇರೆಗೆ ಹತ್ತನೇ ತರಗತಿಯ ನಾಲ್ಕು ಹಾಗೂ ಎಂಟನೇ ತರಗತಿಯ ಓರ್ವ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ.

Vastu Tips For Luck: ಈ ಎರಡು ವಸ್ತುವಿನಿಂದ ನಿಮ್ಮ ಅದೃಷ್ಟ ಬದಲಾಗುತ್ತೆ!

ಇದರಿಂದ ಮನನೊಂದ ಎಂಟನೇ ತರಗತಿ ವಿದ್ಯಾರ್ಥಿನಿ ಅವಮಾನ ತಾಳಲಾರದೆ ಶನಿವಾರ (ಮಾರ್ಚ್ 16) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಬಾಗಲಕೋಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.