Home Interesting Sringeri Minor Girl Rape Case: 15 ವರ್ಷದ ಬಾಲಕಿ ಮೇಲೆ 52 ಜನ 5...

Sringeri Minor Girl Rape Case: 15 ವರ್ಷದ ಬಾಲಕಿ ಮೇಲೆ 52 ಜನ 5 ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಪ್ರಕರಣ; ತಾಯಿ ಸೇರಿ ನಾಲ್ವರು ದೋಷಿಗಳು

Sringeri Minor Girl Rape Case

Hindu neighbor gifts plot of land

Hindu neighbour gifts land to Muslim journalist

Sringeri Minor Girl Rape Case: 15 ವರ್ಷದ ಬಾಲಕಿ ಮೇಲೆ 52 ಜನ 5 ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ಪೋಕ್ಸೋ ನ್ಯಾಯಾಲಯ ಆಕೆಯ ತಾಯಿ ಸೇರಿ ನಾಲ್ವರು ದೋಷಿಗಳೆಂದು ತೀರ್ಪು ನೀಡಿದ್ದು, ಸೋಮವಾರ ನಾಲ್ವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಇದನ್ನೂ ಓದಿ: Sudha Murthy: ಮಹಿಳಾ ದಿನಾಚರಣೆಯಂದೇ ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ; ಮೋದಿ ಹೇಳಿದ್ದೇನು?

ಆರಂಭದಲ್ಲಿ 17 ಜನರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಶೃಂಗೇರಿ ಪೊಲೀಸರು ಆಮೇಲೆ ಒಬ್ಬರಾದ ಮೇಲೊಬ್ಬರಂತೆ ಆಕೆ ತಾಯಿ ಸೇರಿ 53 ಜನರ ವಿರುದ್ಧ ಪ್ರಕರಣ ದಾಖಲಿಸಿ ದೋಷರೋಪಪಟ್ಟಿ ಸಲ್ಲಿಸಿದ್ದರು.

ಸಾಕು ತಾಯಿಯೇ ತನ್ನ 15 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದು, ನ್ಯಾಯಾಲಯ ಮೂರು ವರ್ಷಗಳ ಕಾಲ ಪ್ರತಿಯೊಂದು ಎಫ್‌ಐಆರ್‌ನ್ನು ಪ್ರತ್ಯೇಕ ವಿಚಾರಣೆ ಮಾಡಿತ್ತು. 53 ಜನರ ಪೈಕಿ 49 ಜನ ನಿರ್ದೋಷಿಗಳು. ಆದರೆ ತಾಯಿ ಗೀತಾ, ಆಕೆಯನ್ನು ಮೊದಲ ಬಾರಿಗೆ ಬಳಸಿದ ಅಭಿ ಹಾಗೂ ಬಲವಂತದಿಂದ ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ ಈ ಕೆಲಸಕ್ಕೆ ಹಾಕಿದ ಗಿರೀಶ್‌ ಹಾಗೂ ದೇವಿಶರಣ್‌ ದೋಷಿಗಳು ಎಂದು ತೀರ್ಮಾನ ಮಾಡಿದೆ.

ತನಿಖೆಯ ಹಾದಿ ತಪ್ಪುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಕಾರಣ 2021ರಲ್ಲಿ ಶೃಂಗೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಕೀರ್ತಿಕುಮಾರ್‌ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಹಾಗೂ ಸಿಪಿಐ ಸಿದ್ರಾಮಪ್ಪ ಸರ್ಪೆಂಡ್‌ ಮಾಡಲಾಗಿತ್ತು. ಎಎಸ್‌ಪಿ ಶೃತಿ ಅವರ ಅವಿರತ ಪರಿಶ್ರಮ ಪಟ್ಟು ತನಿಖೆ ನಡೆಸಿದ್ದರು.

ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿದವರು, ಆಕೆಯನ್ನು ಆ ಕೆಲಸಕ್ಕೆ ಪ್ರೇರೇಪಣೆ ಮಾಡುವುದು ಮಾತ್ರ ತಪ್ಪು ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಹಣ ನೀಡಿ ಗ್ರಾಹಕರಾಗಿ ಹೋಗುವುದು ತಪ್ಪಲ್ಲ. ಆಕೆಯನ್ನು ಬೆದರಿಸಿ, ಬಲವಂತದಿಂದ ಕೆಲಸ ಮಾಡಿಸುವುದು ತಪ್ಪು ಎಂದು ಕೃತ್ಯ ಮಾಡಿದವರ ವಿರುದ್ಧ ಸುಪ್ರೀಂ ಆಕ್ರೋಶ ವ್ಯಕ್ತಪಡಿಸಿದೆ.