Political News: ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್

ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಮರು ಆಯ್ಕೆಯಾದ ತಮಗೆ ಅಭಿನಂದನೆ ಸಲ್ಲಿಸಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

 

ಪಾಕಿಸ್ತಾನದ ಹೊಸದಾಗಿ ಆಯ್ಕೆಯಾದ ಪ್ರಧಾನಿ ಶಹಬಾಜ್ ಷರೀಫ್ ಅವರು ಗುರುವಾರ ತಮ್ಮ ಎಕ್ಸ್ ಅಕೌಂಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: Rajnath Singh: ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ

72 ವರ್ಷದ ಶಹಬಾಜ್ ಷರೀಫ್ ಅವರು ಮಾರ್ಚ್ 3 ರಂದು ಪಾಕಿಸ್ತಾನದ ಪ್ರಧಾನಿಯಾಗಿ ತಮ್ಮ ಎರಡನೇ ಅವಧಿಯನ್ನು ಗೆದ್ದು, ಪ್ರತಿಭಟನೆಗಳ ನಡುವೆ ಸಂಸತ್ತಿನಲ್ಲಿ 201 ಮತಗಳನ್ನು ಪಡೆದರು. ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ಐವಾನ್-ಇ-ಸದರ್ನಲ್ಲಿ ಶಹಬಾಜ್ ಷರೀಫ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಜೊತೆಗೆ ಷರೀಫ್ ಅವರ ಪಕ್ಷ ಪಿಎಂಎಲ್-ಎನ್ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿದೆ.

Leave A Reply

Your email address will not be published.