Belthangady: ಉಜಿರೆಯ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ; ಪೊಲೀಸರಿಂದ ಆರೋಪಿಗಳ ಬಂಧನ

Belthangady: ಉಜಿರೆಯ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಮಾಹಿತಿ ಬಂದ ಹಿನ್ನೆಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆಯೊಂದು ಮಾ.6 ರಂದು ನಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Excise Scam : ಅರವಿಂದ್ ಕೇಜ್ರಿವಾಲ್ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್ ಜಾರಿ

ಉಜಿರೆಯ ಹಳೆಪೇಟೆ ಎಂಬಲ್ಲಿರುವ ಸುರೇಶ್‌ ಬೋರ್ಡಿಂಗ್‌ ಆಂಡ್‌ ಲಾಡ್ಜಿಂಗ್/ಐಶ್ವರ್ಯಾ ಲಾಡ್ಜಿಂಗ್‌ & ಬೋರ್ಡಿಂಗ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸ್‌ ನಿರೀಕ್ಷಕರಾದ ಬಿ.ಜಿ.ಸುಬ್ಬಾಪೂರ ಮಠ್‌ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

ಆರೋಪಿಗಳಾದ ರೇಣುಕಾ ಪ್ರಸಾದ್‌ (29), ರಾಜೇಶ್‌ ಮೋಹನ್‌ ನಾಯರ್‌ (34), ನಿತಿನ್‌ ಕುಮಾರ್‌ (28), ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave A Reply

Your email address will not be published.