Dark Parle-G Biscuits: ಮಾರುಕಟ್ಟೆಗೆ ಲಗ್ಗೆ ಇಟ್ಟ ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್; ಸಂಚಲನ ಸೃಷ್ಟಿಸಿದ ಪಾರ್ಲೆ-ಜಿ

Dark Parle-G Biscuits: ಪಾರ್ಲೆಜಿ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಈ ಬಿಸ್ಕೆಟ್ಟಿನ ಪ್ರೇಮಿಗಳು ಎಷ್ಟೋ ಜನರಿದ್ದಾರೆ. ಬಾಲ್ಯದಿಂದಲೂ ಪಾರ್ಲೆ ಜೀ ತಿಂದು, ದೊಡ್ಡವರಾದ ಮೇಲೂ ಈ ಬಿಸ್ಕೆಟ್ಟಿನ ಮೋಹ ಬಿಟ್ಟಿಲ್ಲದವರೂ ಇದ್ದಾರೆ. ಈಗ ಮಾರುಕಟ್ಟೆಯಲ್ಲಿ ಹಲವು ವಿಧದ ಬಿಸ್ಕತ್ತುಗಳು ಲಭ್ಯವಿವೆ. ಕಾಲಕ್ಕೆ ತಕ್ಕಂತೆ ಜನರು ಮತ್ತು ಜನರ ಅಭಿರುಚಿ ಬದಲಾಗುತ್ತಲೇ ಇತ್ತು. ಆದರೆ ಪಾರ್ಲೆ ಜಿ ಇನ್ನೂ ಕ್ಲಾಸಿಕ್ ಬಿಸ್ಕೆಟ್‌ನ ಸ್ಥಾನಮಾನವನ್ನು ಹೊಂದಿದೆ.

ಇದನ್ನೂ ಓದಿ: Belthangady: ಉಜಿರೆಯ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ; ಪೊಲೀಸರಿಂದ ಆರೋಪಿಗಳ ಬಂಧನ

90ರ ದಶಕದ ಜನರಿಗೆ ಇದಕ್ಕಿಂತ ದೊಡ್ಡ ಬಿಸ್ಕೆಟ್ ಬೇರೊಂದಿಲ್ಲ. ಈಗಲೂ ಜನರು ಮಾರುಕಟ್ಟೆಯಲ್ಲಿ ಇದನ್ನು ಸಾಕಷ್ಟು ಮಂದಿ ಖರೀದಿಸುತ್ತಾರೆ. ಭಾರತದಲ್ಲಿ ಹೆಚ್ಚು ರುಚಿಗಳನ್ನು ಹೊಂದಿರದ ಕೆಲವೇ ಬಿಸ್ಕತ್ತುಗಳಲ್ಲಿ ಇದೂ ಒಂದು. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಪಾರ್ಲೆ-ಜಿ ಬಿಸ್ಕತ್ತುಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಪಾರ್ಲೆ ಜಿಯ ಹೆಸರು ಡಾರ್ಕ್ ಪಾರ್ಲೆ ಜಿ. ಇತ್ತೀಚಿನ ದಿನಗಳಲ್ಲಿ, ಹೊಸ ಪಾರ್ಲೆ ಜಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 9 ಲಕ್ಷಕ್ಕೂ ಅಧಿಕ ವೀಕ್ಷಣೆ ಜೊತೆಗೆ ಸಾವಿರಾರು ಲೈಕ್‌ಗಳು ಬಂದಿದೆ. ʼಆನ್ಲೈನ್ ಅಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದು ಸುಳ್ಳು ಸುದ್ದಿʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಬಗ್ಗೆ ಗೂಗಲ್ ನಲ್ಲಿಯೂ ಯಾವುದೇ ಮಾಹಿತಿ ಇಲ್ಲʼ ಎಂದು ಹೇಳಿದ್ದು, ಕೆಲವರು ಡಾರ್ಕ್ ಪಾರ್ಲೆ-ಜಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ನಿಜ ಎಂದು ಹೇಳಿದರೆ, ಇನ್ನೂ ಕೆಲವರು ಇದು ಸುಳ್ಳು ಸುದ್ದಿ, ಇದು ಕೇವಲ AI ರಚಿತ ಫೋಟೋ ಎಂದು ಹೇಳಿದ್ದಾರೆ.

Leave A Reply

Your email address will not be published.