Parliment election survey: ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ- ‘ಇಂಡಿಯಾ’ ಕೂಟ ಗೆಲ್ಲುವ ಸ್ಥಾನಗಳೆಷ್ಟು ಗೊತ್ತಾ?!

Parliment election Suevey: ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈಗಾಗಲೇ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆಗೊಳಿಸಿವೆ.

ಇದನ್ನೂ ಓದಿ: Wedding Anniversary: ವೆಡ್ಡಿಂಗ್ ಆನಿವರ್ಸರಿಗೆ ಗಿಫ್ಟ್ ತರಲಿಲ್ಲವೆಂದು ಗಂಡನಿಗೆ ಚಾಕುವಿನಿಂದ ಇರಿದ ಪತ್ನಿ

ಈ ಬೆನ್ನಲ್ಲೇ ಕೆಲವು ಪತ್ರಿಕೆಗಳು, ಮಾಧ್ಯಮಗಳು ಚುನಾವಣಾ ಸಮೀಕ್ಷೆಗಳನ್ನು(parliament Election Survey) ಕೈಗೊಳ್ಳುತ್ತಿವೆ. ಅಂತೆಯೇ ಇದೀಗ ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು ದೇಶದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದೆಂದು ತಿಳಿಸಿದೆ.

ಹೌದು, ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಎನ್‌ಡಿಎ 378 ಹಾಗೂ ತೃಣಮೂಲ ಕಾಂಗ್ರೆಸ್‌ ಹೊರತಾದ ಇಂಡಿಯಾ ಕೂಟ 98 ಸ್ಥಾನ ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ.

ಅಲ್ಲದೆ ಈ ಪೈಕಿ ಬಿಜೆಪಿ 335 ಸ್ಥಾನ ಪಡೆಯಲಿದ್ದು, ಕಳೆದ ಸಲಕ್ಕಿಂತ 32 ಸ್ಥಾನ ಹೆಚ್ಚು ಸಂಪಾದಿಸಲಿದೆ. ಕಳೆದ ಸಲ 52 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಈ ಸಲ ಕೇವಲ 37ಕ್ಕೆ ಕುಸಿಯಲಿದೆ. ಇದು ಕಾಂಗ್ರೆಸ್ ಇತಿಹಾಸದಲ್ಲಿ ಹೀನಾಯ ಸೋಲಾಗಿದೆ. ಬಳಿಕ ತೃಣಮೂಲ ಕಾಂಗ್ರೆಸ್‌ 21 ಸ್ಥಾನ ಪಡೆದು 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಚ್ಚರಿ ಭವಿಷ್ಯ ನುಡಿದಿದೆ.

Leave A Reply

Your email address will not be published.