ಪಾಕಿಸ್ತಾನ ಪರ ಘೋಷಣೆ ವೀಡಿಯೋ ಅಸಲಿ?!

Pakistan:ವಿಧಾನಸೌಧದಲ್ಲಿ ಪಾಕಿಸ್ತಾನ(Pakistan) ಪರ ಘೋಷಣೆ ಕೂಗಿದ್ದಾರೆಂದು ಆರೋಪಿಸಲಾದ ಪ್ರಕರಣದ ವಿಡಿಯೊಗಳು ಅಸಲಿ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಖಚಿತಪಡಿಸಿದ್ದಾರೆ ಎಂಬುದು ಗೊತ್ತಾಗಿದೆ.

 

ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ಹಾಗೂ ಘಟನಾ ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದ ವಿಡಿಯೋಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿದ್ದ ತಜ್ಞರು, ಎಲ್ಲ ವಿಡಿಯೊಗಳು ಅಸಲಿ ಎಂಬುದಾಗಿ ಪೊಲೀಸರಿಗೆ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ವೈಜ್ಞಾನಿಕ ಮಾದರಿಯಲ್ಲಿ ವಿಡಿಯೊಗಳನ್ನು ವಿಶ್ಲೇಷಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಎರಡು ದಿನಗಳ ಹಿಂದೆಯೇ ಉನ್ನತ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ವಿಡಿಯೊಗಳು ಅಸಲಿಯಾಗಿದ್ದು, ತಿರುಚಿಲ್ಲ ಎಂದು ವರದಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.

 

ವರದಿ ಬಂದಿರುವುದನ್ನು ಖಚಿತಪಡಿಸಿರುವ ಪೊಲೀಸ್ ಮೂಲಗಳು ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆಯೇ? ಇಲ್ಲವೇ ಎಂಬುದರ ಬಗ್ಗೆ ಬಹಿರಂಗಗೊಳಿಸುತ್ತಿಲ್ಲ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಮತ್ತೊಂದೆಡೆ ನಾಸೀರ್ ಹುಸೇನ್ ಅವರ ಗೆಲುವಿನ ಸಂಭ್ರಮಾಚರಣೆ ವೇಳೆ ಹಾಜರಿದ್ದ ಬ್ಯಾಡಗಿಯ ಮಹಮದ್ ಶಫಿ ನಾಶಿಪುಡಿ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಎಂಟೂ ಮಂದಿಯ ಧ್ವನಿ ಮಾದರಿ ಸಂಗ್ರಹಿಸಿ ಎಫ್ ಎಸ್‌ಎಲ್‌ಗೆ ಕಳುಹಿಸಿದ್ದರು. ವಿಡಿಯೊದಲ್ಲಿರುವ ಘೋಷಣೆ ಖಚಿತಪಟ್ಟ ಬಳಿಕ, ಘೋಷಣೆ ಕೂಗಿದ ವ್ಯಕ್ತಿಯ ಧ್ವನಿ ಹೋಲಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ :D.K: ಅಯೋಧ್ಯೆಗೆ ತೆರಳಿದ ವ್ಯಕ್ತಿ ಮನೆಗೆ ಇನ್ನೂ ಬಂದಿಲ್ಲ

Leave A Reply

Your email address will not be published.